
Cinema : ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು..?
Tuesday, September 27, 2022
ಬಾಲಿವುಡ್ ತಾರೆ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೀಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ.
ಅಸ್ವಸ್ಥತರಾದ ದೀಪಕಾ ಪಡುಕೋಣೆ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಹಲವು ಪರೀಕ್ಷೆಗಳನ್ನು ನಡೆಸಲಾಗಿದೆಯಂತೆ. ಆದರೆ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಬಿಡುಗಡೆ ಆಗಿಲ್ಲ.
ದೀಪಕಾ ದೀಪಿಕಾ ಪಡುಕೋಣೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ, ಅಭಿಮಾನಿಗಳಲ್ಲಿ ಆತಂಕ ಮೂಡಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಈ ಬಗ್ಗೆ ಅಭಿಮಾನಿಗಳು ಸ್ಪಷ್ಟನೆ ಸಿಗಲಿ ಅಂತ ಕಾಯುತ್ತಿದ್ದಾರೆ.