ಮಂಗಳೂರಿನಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರು ಪರಾರಿ! - CCTV ಯಲ್ಲಿ ಪರಾರಿ ದೃಶ್ಯ ಸೆರೆ - Video
Wednesday, September 21, 2022
ಮಂಗಳೂರು ಮಂಗಳೂರಿನ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಪರಾರಿಯಾದ ಘಟನೆ ಇಂದು ನಡೆದಿದೆ.
ನಗರದ ವಿಕಾಸ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಇಂದು ಮುಂಜಾನೆ ಮೂರು ಗಂಟೆಗೆ ಪರಾರಿಯಾಗಿದ್ದಾರೆ. ವಿಕಾಸ್ ಕಾಲೇಜಿನ ಹಾಸ್ಟೆಲ್ ನಲ್ಲಿದ್ದ ಯಶಸ್ವಿನಿ,ದಕ್ಷತಾ,ಸಿಂಚನಾ ಪರಾರಿಯಾದ ವಿದ್ಯಾರ್ಥಿನಿಯರು. ಇವರು ಹಾಸ್ಟೆಲ್ ನ ಕಿಟಕಿಯನ್ನು ಮುರಿದು ಪರಾರಿಯಾಗಿದ್ದಾರೆ.
ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದು, ಯಶಸ್ವಿನಿ ಮತ್ತು ದಕ್ಷತಾ ಬೆಂಗಳೂರು ಮೂಲದವರಾಗಿದ್ದಾರೆ. ಇವರು ಮೂವರು ಪಿಯು ಕಾಲೇಜಿನ ವಿದ್ಯಾರ್ಥಿನಿಯರು.
ನಾವು ಹೋಗುತ್ತಿದ್ದೇವೆ,ಕ್ಷಮಿಸಿ ಅಂತಾ ಅವರು ಪತ್ರ ಬರೆದಿಟ್ಟು ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ರಸ್ತೆಗೆ ಬಂದು ನಡೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.