ಧರ್ಮಸ್ಥಳ- 16 ವರ್ಷದ ಬಾಲಕಿಯ ಮನೆಗೆ ರಾತ್ರಿ ಬಂದು ಅತ್ಯಾಚಾರ ಮಾಡಿದ INSTAGRAM ಫ್ರೆಂಡ್
Monday, September 5, 2022
ಮಂಗಳೂರು: ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿರುವ 16 ವರ್ಷದ ಬಾಲಕಿಯ ಮನೆಗೆ ರಾತ್ರಿ ಬಂದು ಆಕೆಯ INSTAGRAM ಫ್ರೆಂಡ್ ಅತ್ಯಾಚಾರ ಮಾಡಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೊಂದ ಬಾಲಕಿಯು ಖಾಸಗಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು,16 ವರ್ಷ ವಯಸ್ಸಿನವಳಾಗಿದ್ದಾಳೆ. ಸುಮಾರು ಒಂದು ವರ್ಷಗಳ ಹಿಂದೆ Instagram ಮೂಲಕ ಕಾನೂನು ಸಂಘರ್ಷಕ್ಕೊಳಗಾದ (17 ವರ್ಷದ) ಬಾಲಕನ ಪರಿಚಯವಾಗಿತ್ತು. ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಮೊಬೈಲ್ ನಲ್ಲಿ ಮೇಸೇಜ್ ಮಾಡುತ್ತಿದ್ದವನು ದಿನಾಲೂ ಈಕೆ ಯ ಮನೆಗೆ ಬರುವುದಾಗಿ ತಿಳಿಸುತ್ತಿದ್ದವನು 2022 ಆಗಷ್ಟ್ 13 ರಂದು ರಾತ್ರಿ ಆಕೆ ಮನೆಯಲ್ಲಿದ್ದ ಸಮಯ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ನಾನು ಮನೆಗೆ ಬರುತ್ತಿದ್ದೇನೆ ನೀನು ಬಾಗಿಲು ತೆಗೆಯಬೇಕು ತೆಗೆಯದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆಂದು ಹೆದರಿಸಿದ್ದಾನೆ.
ರಾತ್ರಿ ಎಲ್ಲರೂ ಮಲಗಿದ ನಂತರ ಸಮಯ ಸುಮಾರು ರಾತ್ರಿ 12 ಗಂಟೆಯ ಹೊತ್ತಿಗೆ ಈಕೆಯ ಮನೆಯ ಬಳಿ ಬಂದು ನಿಮ್ಮ ಮನೆಯ ಬಳಿ ಬಂದಿರುತ್ತೇನೆಂದು ಮೆಸೇಜ್ ಮಾಡಿದ್ದು, ಆಕೆ ಹೆದರಿ ಮನೆಯಲ್ಲಿ ಎಲ್ಲರೂ ಮಲಗಿರುವುದನ್ನು ಖಚಿತ ಪಡಿಸಿಕೊಂಡು ಮನೆಯ ಎದುರಿನ ಬಾಗಿಲಿನ ಚಿಲಕವನ್ನು ತೆಗೆದು ಆಕೆ ಒಬ್ಬಳೇ ಮಲಗಿದ್ದ ರೂಂ ಗೆ ಕರೆದುಕೊಂಡು ಹೋದಾಗ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಆಕೆಯ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.
ಒತ್ತಾಯ ಪೂರ್ವಕವಾಗಿ ಅತ್ಯಾಚಾರ ನಡೆಸಿ ಈ ವಿಚಾರವನ್ನು ಯಾರಲ್ಲಿಯೂ ಹೇಳಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾನೆ. ಇದೇ ರೀತಿ ಆಕೆಯನ್ನು ಹೆದರಿಸಿ ರಾತ್ರಿ ಹೊತ್ತಿನಲ್ಲಿ ಆಕೆಯ ಮನೆಗೆ 4-5 ಸಲ ಬಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ.
ಸೆ.2 ರಂದು ಆಕೆಗೆ ದೂರವಾಣಿ ಕರೆ ಮಾಡಿದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಈ ದಿನ ರಾತ್ರಿ ಮನೆಗೆ ಬರುತ್ತೇನೆಂದು ತಿಳಿಸಿದ್ದು, ಆದರೆ ಆಕೆ ಬೇಡವೆಂದೂ ಹೇಳಿದ್ದರೂ ಸಹ ರಾತ್ರಿ ಸಮಯ ಸುಮಾರು 11.50 ಗಂಟೆಗೆ ಮನೆಯಲ್ಲಿ ಎಲ್ಲರೂ ಮಲಗಿದ್ದ ಹೊತ್ತಲ್ಲಿ ಮನೆಯೊಳಗೆ ಬಂದು ಆಕೆಯ ಜೊತೆಗೆ ಲೈಂಗಿಕ ಸಂಪರ್ಕ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ.
ಈ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 62/2022 ಕಲಂ: 376,506 ಐ ಪಿ ಸಿ ಕಲಂ 5(L),6 ಪೋಕ್ಸೋ ಕಾಯ್ದೆ 2012 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ,.