-->
ಮಂಗಳೂರು: ರಾತ್ರೋರಾತ್ರಿ ಪೊಲೀಸ್ ದಾಳಿಯಲ್ಲಿ 10 ಮಂದಿ ಪಿಎಫ್ಐ ಮುಖಂಡರು ಅರೆಸ್ಟ್; ಓರ್ವನಿಗೆ ಅನಾರೋಗ್ಯ

ಮಂಗಳೂರು: ರಾತ್ರೋರಾತ್ರಿ ಪೊಲೀಸ್ ದಾಳಿಯಲ್ಲಿ 10 ಮಂದಿ ಪಿಎಫ್ಐ ಮುಖಂಡರು ಅರೆಸ್ಟ್; ಓರ್ವನಿಗೆ ಅನಾರೋಗ್ಯ


ಮಂಗಳೂರು: ನಗರದಲ್ಲಿ ರಾತ್ರೋರಾತ್ರಿ ಮಂಗಳೂರು ಪೊಲೀಸರು ದಾಳಿ ನಡೆಸಿ 10 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಿದ್ದಾರೆ. ಅನಾರೋಗ್ಯದಿಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓರ್ವನನ್ನು ಆತ ಡಿಸ್ಚಾರ್ಜ್ ಬಳಿಕ ಬಂಧಿಸಲಾಗುತ್ತದೆ ಪೊಲೀಸರು ತಿಳಿಸಿದ್ದಾರೆ.

ಪಾಂಡೇಶ್ವರ ನಿವಾಸಿ ಮುಹಮ್ಮದ್ ಶರೀಫ್, ಮುಜೈರ್ ಕುದ್ರೋಳಿ, ಕುದ್ರೋಳಿ ನಿವಾಸಿ ಮುಹಮ್ಮದ್ ನೌಫಲ್ ಹಂಝ, ಕೆ.ಸಿ.ನಗರ ನಿವಾಸಿ ಶರೀಫ್ ಪಾಂಡೇಶ್ವರ, ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ನವಾಜ್ ಉಳ್ಳಾಲ,‌  ಮುಹಮ್ಮದ್ ಇಕ್ಬಾಲ್ ಉಳಾಯಿಬೆಟ್ಟು, ಕೃಷ್ಣಾಪುರ ನಿವಾಸಿ ದಾವೂದ್ ನೌಶಾದ್ ಚೊಕ್ಕಬೆಟ್ಟು, ಬಜ್ಪೆ ನಿವಾಸಿ ಇಸ್ಮಾಯಿಲ್, ಕಿನ್ನಿಪದವು ನಿವಾಸಿ ನಝೀರ್, ಶಬೀರ್ ಅಹಮದ್, ಮುಂಡೇಲು ನಿವಾಸಿ ಇಬ್ರಾಹಿಂ ಮೂಡಬಿದಿರೆ ಬಂಧಿತ ಆರೋಪಿಗಳು.


ಇತ್ತೀಚೆಗೆ ಪಿಎಫ್ಐ ಕಚೇರಿ, ಪಿಎಫ್ಐ ಮುಖಂಡರ ಮನೆಯ ಮೇಲೆ ಎನ್ಐಎ ದಾಳಿ ನಡೆಸಿತ್ತು. ಈ ವೇಳೆ ಇದನ್ನು ವಿರೋಧಿಸಿ ಹಲವಾರು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದ್ದರಿಂದ ಮುನ್ನೆಚ್ಚರಿಕಾ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮಂಗಳೂರು ಗ್ರಾಮಾಂತರ, ಮಂಗಳೂರು ಉತ್ತರ, ಉಳ್ಳಾಲ, ಬಜ್ಪೆ, ಸುರತ್ಕಲ್, ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ 10 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಿದ್ದರು.

Ads on article

Advertise in articles 1

advertising articles 2

Advertise under the article