UDUPI : ಸಮುದ್ರಕ್ಕೆ ಬಿದ್ದು ಮೀನುಗಾರ ನೀರುಪಾಲು
Monday, August 29, 2022
ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಾಲು ಜಾರಿ ಬೋಟಿನಿಂದ ಬಿದ್ದು ಮೀನುಗಾರರೊಬ್ಬರು ನೀರುಪಾಲಾಗಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಬೋಟ್ ನಲ್ಲಿ ಕಲಾಸಿಯಾಗಿ ದುಡಿಯುತ್ತಿದ್ದ ರವಿ(43) ನೀರುಪಾಲಾಗಿರುವ ಮೀನುಗಾರ. ಇತರ ಮೀನುಗಾರರೊಂದಿಗೆ ಶ್ರೀಕಿರಣ್ ಎಂಬ ಬೋಟ್ ನಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮಾಡುತ್ತಿರು ವಾಗ ಮಧ್ಯರಾತ್ರಿ ರವಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.