
UDUPI : ಜನಪ್ರತಿನಿಗಳ ವಿರುದ್ಧ ಮೀನುಗಾರರ ಪ್ರತಿಭಟನೆ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ
ಭಾರಿ ಮಳೆಯಿಂದ, ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ, 50ಕ್ಕೆ ಹೆಚ್ಚು ದೋಣಿಗಳು ಸಮುದ್ರ ಪಾಲಾಗಿ ಕೋಟ್ಯಂತರ ರೂ ನಷ್ಟು ಉಂಟಾಗಿತ್ತು. ಇಷ್ಟದರೂ ದೋಣಿ ದುರಂತ ಸ್ಥಳಕ್ಕೆ ತಹಶೀಲ್ದಾರನ್ನು ಹೊರತು ಪಡಿಸಿ ಸಚಿವರು ಮತ್ತು ಅಧಿಕಾರಿಗಳು ಬಾರದೆ ಇರುವುದನ್ನು ಖಂಡಿಸಿ ಬೈಂದೂರು ತಾಲೂಕು ಕಚೇರಿ ಎದರು ಮೀನುಗಾರು ಬೃಹತ್ ಪ್ರತಿಭಟನೆ ನಡೆಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಕದ ಜಿಲ್ಲೆಗೆ ಬಂದಿದ್ದು, ಶಿರೂರಿಗೆ ಬಾರದೆ ಇರುದರಿಂದ ಸರ್ಕಾರ ಮೀನುಗಾರರನ್ನು ಕಡೆಗಣೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ತಾಳ್ಮೆಗೆ ಒಂದು ಮೀತಿಇದೆ, ಇನ್ನೂ ಹತ್ತು ದಿನದ ಒಳಗೆ ಇನ್ನೊಂದು ಪ್ರತಿಭಟನೆಗೆ ಅವಕಾಶ ನಿಡಬೇಡಿ, ಶೀಘ್ರವಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಸಚಿವರು ಭೇಟಿ ನೀಡಿ ನಮ್ಮ ಸಮಸ್ಯೆ ಕೇಳಿ ಪರಿಹಾರ ಒದಗಿಸಬೇಕು ಅಂತ ಖಡಕ್ ಎಚ್ಚರಿಕೆ ನೀಡುವ ಮೂಲಕ
ಬೈಂದೂರು ತಾಲೂಕು ತಹಸಿಲ್ದಾರ ಕೀರಣ್ ಗೋರಯ್ಯರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು