-->
UDUPI : ಗೋ ಮಾಂಸ ಸಾಗಾಟ : ಓರ್ವ ಬಂಧನ, ಮತ್ತೋರ್ವ ಪರಾರಿ

UDUPI : ಗೋ ಮಾಂಸ ಸಾಗಾಟ : ಓರ್ವ ಬಂಧನ, ಮತ್ತೋರ್ವ ಪರಾರಿ

ಕುಂದಾಪುರದಿಂದ  ಭಟ್ಕಳದತ್ತ ಕಾರಿನಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದವನನ್ನು ಉಡುಪಿ ಜಿಲ್ಲೆಯ ಬೈಂದೂರುನಲ್ಲಿ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ನಿವಾಸಿ ಮಹಮ್ಮದ್ ಗೌಸ್ ಗವಾಯಿ (37)‌ ಬಂಧಿತ ಆರೋಪಿ, ನಜ್ಮುಲ್ ಎಂಬಾತ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಬೈಂದೂರು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಕಾರನ್ನು ನಿಲ್ಲಿಸಿದಾಗ, ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದ ನಜ್ಮುಲ್ ಕಾರಿನಿಂದ ಇಳಿದು ಓಡಿ ಪರಾರಿಯಾಗಿದ್ದಾನೆ. 
ಚಾಲಕ ಮಹಮ್ಮದ್ ಗೌಸ್ ಗವಾಯಿನನ್ನು  ವಿಚಾರಿಸಿದಾಗ ಗೋ ಮಾಂಸವನ್ನು ಕುಂದಾಪುರ ಕಡೆಯಿಂದ ತಂದು ಭಟ್ಕಳದ ಮದುವೆ ಕಾರ್ಯಕ್ರಮಕ್ಕೆ ನೀಡಲು ಹೋತ್ತಿರುವುದಾಗಿ ತಿಳಿಸಿದ್ದು, ಆತನನ್ನು  ಬಂಧಿಸಿದ್ದಾರೆ. 22 ಸಾವಿರ ಮೌಲ್ಯದ 150 ಕೆ.ಜಿ ಮಾಂಸ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜಾನುವಾರು ಕಳವುಗೈದು ಮಾಂಸ ಮಾಡಿ ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಬಗ್ಗೆ ಪ್ರಕರಣ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article