UDUPI : ಬೋನಿಗೆ ಬಿದ್ದ ಚಿರತೆ
Monday, August 22, 2022
ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸಿಕ್ಕಿಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ನಡೆದಿದೆ.
ಇಲ್ಲಿನ ಬೋಳಕೋಡಿಯಲ್ಲಿ ಚಿರತೆಗಳು ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ, ಅರಣ್ಯ ಇಲಾಖೆಯವರು, ಬೋಳಕೋಡಿಯ ಗುಣವತಿ ಎಂಬುವರ ಮನೆಯ ಬಳಿ ಬೋನಿಗೆ ಇರಿಸಿದ್ದರು. ರಾತ್ರಿ ವೇಳೆ ಚಿರತೆ ಬೋನಿಗೆ ಬಿದ್ದಿದ್ದು, ಚಿರತೆಯನ್ನು ಶಿವಮೊಗ್ಗದ ಭಗವತಿ ಮೀಸಲು ಅರಣ್ಯಕ್ಕೆ ಕೊಂಡೊಯ್ಯಲಾಗಿದೆ.