UDUPI : ಮನೆಯವರು ತೀರ್ಥಯಾತ್ರೆ ಹೋದಾಗ, ಮನೆಯಲ್ಲಿದ್ದ ನಗ ನಗದು ದೋಚಿದ ಖದೀಮರು
Sunday, August 7, 2022
ಮನೆ ಮಂದಿ ಎಲ್ಲರೂ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗ ಮತ್ತು ನಗದು ಕಳವುಗೈದ ಘಟನೆ ಉಡುಪಿ ಜಿಲ್ಲೆಯ ಕುಂಭಾಶಿಯ ವಿನಾಯಕ ನಗರದಲ್ಲಿ ನಡೆದಿದೆ. ಶ್ರೀದೇವಿ ನಿಲಯದ ಮಂಜುನಾಥ ಜೋಗಿ ಮತ್ತು ಮನೆಯವರು ಪಂಡರಾಪುರ ಹಾಗೂ ಶಿರ್ಡಿಗೆ ತೀರ್ಥಯಾತ್ರೆಗೆಂದು ಜುಲೈ 29ರಿಂದ ಆಗಸ್ಟ್ 5 ತೆರಳಿದ್ದರು.
ಮನೆಗೆ ವಾಪಸ್ಸಾದ ಕುಟುಂಬಕ್ಕೆ ಮನೆಯಲ್ಲಿ ಹಿಂಬದಿ ಬಾಗಿಲು ಒಡೆದಿರುವುದು ಗೊತ್ತಾಗಿದೆ. ಬಳಿಕ ಒಳ ಬಂದು ನೋಡಿದರೆ ಕಪಾಟಿನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಪಾಟಿನಲ್ಲಿದ್ದ ೮ ಗ್ರಾಂ ಚಿನ್ನದ ಬ್ರಾಸ್‌ಲೆಟ್, ೧೨ ಗ್ರಾಂನ ಚಿನ್ನದ ಸರ, ೪ ಗ್ರಾಂನ ಉಂಗುರ, ೩ ಗ್ರಾಂನ ಉಂಗುರ ಸೇರಿದಂತೆ ಒಟ್ಟು ೧.೨೦ ಲಕ್ಷ ರೂ. ಮೌಲ್ಯದ ೨೭ ಗ್ರಾಂ ಚಿನ್ನಾಭರಣ, ೧೩೫೦೦ ರೂ. ನಗದು ಕಳವಾಗಿದೆ ಅಂತ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.