UDUPI : ಶಂಕರಪುರ ಮಲ್ಲಿಗೆಗೆ ಭಾರಿ ಡಿಮ್ಯಾಂಡ್
Thursday, August 4, 2022
ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಕರಾವಳಿಗರಿಗೆ ಉಡುಪಿಯ ಶಂಕರಪುರ ಮಲ್ಲಿಗೆ ಭಾರೀ ಶಾಕ್ ನೀಡಿದ್ದು, ಮಲ್ಲಿಗೆಯ ದರ ಎರಡು ಸಾವಿರ ರೂ ಸನಿಹಕ್ಕೆ ಬಂದಿದೆ. ಕಟ್ಟೆಯಲ್ಲಿ ಮಲ್ಲಿಗೆಯ ದರ ಅಟ್ಟೆಗೆ 2100 ರೂ. ನಿಗದಿಯಾಗಿದ್ದು, 2500ರೂ.ತನಕ ಮಾರಾಟವಾಗುತ್ತಿದೆ. ಇದು ಈ ಬಾರಿಯ ಹೆಚ್ಚಿನ ದರವಾಗಿದೆ.
ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಮಲ್ಲಿಗೆಯ ದರ ಕಡಿಮೆಯಾಗಿರುತ್ತದೆ. ವರಮಹಾಲಕ್ಷ್ಮಿ ಪೂಜೆಯೂ ಕೂಡ ಬೆಲೆ ಏರಿಕೆಗೆ ಒಂದು ಕಾರಣವಾದರೆ, .ಈ ಬಾರಿ ಭಾರೀ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು ಇದರಿಂದಾಗಿ ಮಲ್ಲಿಗೆಯ ದರ ಹೆಚ್ಚಾಗಿದೆ..