UDUPI : ನಾಲ್ಕು ತಿಂಗಳ ಮಗು ಅನಾರೋಗ್ಯದಿಂದ ಸಾವು
Tuesday, August 30, 2022
ಹಾಲು ಕುಡಿಸಿ ಮಲಗಿಸಿದ ಮಗು ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಉಪ್ಪುಂದಲ್ಲಿ ನಡೆದಿದೆ. ಜನತಾ ಕಾಲನಿ ೪ ತಿಂಗಳ ಸಾನ್ವಿತಾ ಮೃತಪಟ್ಟ ಹೆಣ್ಣು ಮಗು.
ಮಗುವಿನ ತಾಯಿ ಶೈಲಾ, ರಾತ್ರಿ 11 ಗಂಟೆಗೆ ಮಗುವಿಗೆ ಹಾಲು ಕುಡಿಸಿ ಮಲಗಿಸುವ ವೇಳೆ ಸಾನ್ವಿತಾಳು ಒಮ್ಮೆಲೇ ಜೋರಾಗಿ ಅಳುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮಗುವನ್ನು ಕೂಡಲೇ ಬೈಂದೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರಕ್ಕೆ ಹೋಗುವಂತೆ ತಿಳಿಸಿದ್ದು,
ಕುಂದಾಪುರ ಖಾಸಗಿ ಆಸ್ಪತ್ರೆಗೆ ರಾತ್ರಿ 12.15ಗಂಟೆಗೆ ಕರೆದುಕೊಂಡು ಹೋದಾಗ ಮಗುವನ್ನು ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.