UDUPI ; ಬಟ್ಟೆಗೆ ಇಸ್ತ್ರಿ ಮಾಡಲು ಹೋದ ಯುವತಿ ನಾಪತ್ತೆ
Tuesday, August 30, 2022
ಬಟ್ಟೆಗೆ ಇಸ್ತ್ರಿ ಮಾಡಲು ಹೋಗುವುದಾಗಿ ನೆರೆಮನೆಯವರಲ್ಲಿ ತಿಳಿಸಿ ಹೋದ ಯುವತಿ ನಾಪತ್ತೆಯಾದ ಘಟನೆ ಆಗಸ್ಟ್ 25ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಎಂಬಲ್ಲಿ ನಡೆದಿದೆ. ಬೆಳಪು ನಿವಾಸಿ ಆಶಾ(36) ಕಾಣೆಯಾಗಿರುವ ಮಹಿಳೆ.
ಆಶಾ 25ರಂದು ಮಧ್ಯಾಹ್ನ ವೇಳೆ, ಬಟ್ಟೆಯನ್ನು ಇಸ್ತ್ರಿ ಮಾಡಲು ಹೋಗುವುದಾಗಿ ನೆರೆಮನೆಯವರಲ್ಲಿ ತಿಳಿಸಿ ಹೋಗಿದ್ದಳು, ಬಳಿಕ ತನ್ನ ಗಂಡನಿಗೆ ನಿಮ್ಮೊಂದಿಗೆ ಇರಲು ಇಷ್ಟವಿಲ್ಲ,ನನ್ನಷ್ಟಕ್ಕೆ ಇರುತ್ತೇನೆ ಎಂದು ಬೇರೆ ಯಾರದೋ ಮೊಬೈಲ್‌ನಿಂದ ಕರೆ ಮಾಡಿ ತಿಳಿಸಿದ್ದು,ಬಳಿಕ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ. ಆಶಾ ಅವರು ಈ ಹಿಂದೆಯೂ ಒಮ್ಮೆ ಮನೆ ಬಿಟ್ಟು ಹೋಗಿದ್ದು ಮಣಿಪಾಲ ಠಾಣೆ ಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು ಬಳಿಕ ಪತ್ತೆಯಾಗಿದ್ದರು. ಆಶಾಳ ಪತ್ತೆ ಬಗ್ಗೆ ನೆರೆಕರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದ್ದು ದೂರು ನೀಡಲು ವಿಳಂಬವಾಗಿದೆ ಎಂದು ಆಕೆಯ ಗಂಡ ಸುಬ್ರಹ್ಮಣ್ಯ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.