![UDUPI : .ಚಿರತೆಕಾಟದಿಂದ ನಮ್ಮನ್ನು ಕಾಪಾಡ್ರಪ್ಪ.!! UDUPI : .ಚಿರತೆಕಾಟದಿಂದ ನಮ್ಮನ್ನು ಕಾಪಾಡ್ರಪ್ಪ.!!](https://blogger.googleusercontent.com/img/b/R29vZ2xl/AVvXsEjoVsU9GcX0PjqRojew_IJa6nBOjjGnSyqfa4Xv7piXi38BfL5FaB2JTqp3omSTe7GN5qqh4-ILpIaCYNKzmJHw1646PR94oUeS84ElYWao2KFrXoWEI7PoVe289XC5zISAt0vA4J2NXOw/s1600/1658836640178648-0.png)
UDUPI : .ಚಿರತೆಕಾಟದಿಂದ ನಮ್ಮನ್ನು ಕಾಪಾಡ್ರಪ್ಪ.!!
Tuesday, July 26, 2022
ಉಡುಪಿ ಜಿಲ್ಲೆ ಬ್ರಹ್ಮಾವದ ಶಿರಿಯಾರ ಪಡುಮುಂಡು ಎಂಬಲ್ಲಿ ಚಿರತೆ ಕಾಟ ಜನತನ್ನು ಭಯ ಭೀತರನ್ನಾಗಿಸಿದೆ.
ಕಳೆದ ಮೂರು ನಾಲ್ಕು ತಿಂಗಳಿನಿಂದ ಈ ಭಾಗದಲ್ಲೇ ಸುಳಿದಾಡುತ್ತಿದೆ. ಮನೆಯ ಪರಿಸರಕ್ಕೆ ನುಗ್ಗಿ ನಾಯಿಗಳನ್ನು ಬೇಟೆಯಾಡುತ್ತಿದೆ. ಪಡುಮುಂಡುವಿನ ಜನ ರಾತ್ರಿ ಹಗಲು ಪ್ರಾಣಭಯದಲ್ಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್, ಅರಣ್ಯ ಇಲಾಖೆಗೆ ಚಿರತೆ ಹಾವಳಿ ಬಗ್ಗೆ ದೂರು ನೀಡಿದರೂ ಯಾರು ಕೂಡ ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಆಕ್ರೋಶ ಗೊಂಡಿದ್ದಾರೆ.
ಸದ್ಯ ಊರಿನಲ್ಲಿ ರಾತ್ರಿ ವೇಳೆ ಪ್ರತ್ಯಕ್ಷವಾಗುವ ಚಿರತೆಯನ್ನು ಸೆರೆ ಹಿಡಿಯಲು ಸ್ಥಳೀಯ ಯುವಕರೇ ಬೋನು ನಿರ್ಮಾಣ ಮಾಡಿದ್ದಾರೆ. ಅದ್ರೆ ಚಿರತೆ ಸೆರೆಯಾಗಿಲ್ಲ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಬೋನು ರಚಿಸಿ ಚಿರತೆಕಾಟದಿಂದ ಜನರನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.