UDUPI : ಈಶ್ವರಪ್ಪನನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಭಾಸ್ಕರ್ ರಾವ್ ಆಕ್ರೋಶ
Tuesday, July 26, 2022
ಸಂತೋಷ್ ಪಾಟೀಲ್ ಆತ್ಮಹತ್ಯೆಯ ಆರೋಪದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಹಾಗಾದರೆ ಸಾವೇ ಆಗಿಲ್ವ? ಆ ಕಂಟ್ರಾಕ್ಟರ್‌ಗೆ ಕಿರುಕುಳನೇ ಕೊಟ್ಟಿಲ್ವಾ? ಐಪಿಸಿ ಸೆಕ್ಷನ್ 306ರಲ್ಲಿ ಈಶ್ವರಪ್ಪನ್ನ ಯಾಕೆ ಅರೆಸ್ಟ್ ಮಾಡಿಲ್ಲ? ಅಂತ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅವರ ಸಂತೋಷ್ ಪಾಟೀಲ್ ಅವತ ಪತ್ನಿ ನ್ಯಾಯ ಕೇಳಲು ಮುಖ್ಯಮಂತ್ರಿ ಬಳಿಗೂ ಹೋಗಿದ್ದಾರೆ. ಆದರೂ ಏನು ಕ್ರಮ ತೆಗೆದುಕೊಂಡಿಲ್ಲ, ಎಂದು ಭಾಸ್ಕರ್ ರಾವ್ ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿಗೆ ಅಧಿಕಾರದ ಮದ ಬಂದಿದೆ. ಬಿಜೆಪಿಯವರು ರಾಮನ ಭಕ್ತರಲ್ವಾ? ನಿಮ್ಮನ್ನು ರಾಮ ಕೂಡ ಕ್ಷಮಿಸಲ್ಲ. ಏನೂ ನಡೆದಿಲ್ಲ ಅಂದ್ರೆ ತನಿಖೆಯನ್ನು ಯಾಕೆ ಮುಚ್ಚಿಟ್ಟರು? ಈಶ್ವರಪ್ಪ ಮತ್ತೊಮ್ಮೆ ಮಂತ್ರಿಯೆಯಾದರೆ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡ್ತೇವೆ. ಅವರ ಪಕ್ಷದ ಕಂಟ್ರಾಕ್ಟರ್ ಗಳಿಗೆ ರಕ್ಷಣೆ ಇಲ್ಲ. ಇನ್ನು ಬೇರೆಯವರಿಗೆ ಹೇಗೆ ರಕ್ಷಣೆ ಸಿಗುತ್ತೆ ಎಂದು ಭಾಷ್ಕರ್ ರಾವ್ ಹೇಳಿದ್ದಾರೆ..