
UDUPI : ಮಂದಾರ್ತಿಯಲ್ಲಿ ಮಳೆಗಾಲದ ಯಕ್ಷಗಾನ ಹರಕೆ ಸೇವೆ ಆರಂಭ
ಉಡುಪಿಯ ಪ್ರಸಿದ್ಧ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಮಳೆಗಾಲದ ಯಕ್ಷಗಾನ ಹರಕೆ ಸೇವೆ ಆರಂಭವಾಗಿದೆ.
ಕೊರೋನಾ ನಂತರ ದೇವಿಯ ಮುಂದೆ ಯಕ್ಷಗಾನ ಬಯಲಾಟ ನಡೆಸುವ ಬಗ್ಗೆ ದರ್ಶನದ ಮೂಲಕ ಪ್ರಸಾದ ತೆಗೆಯಲಾಗಿತ್ತು. ಮಳೆಗಾಲದಲ್ಲಿ ಹರಕೆ ಯಕ್ಷಗಾನ ಶ್ರೀಕ್ಷೇತ್ರದಲ್ಲಿ ಆಡಿಸಬಹುದು ಎಂದು ಪ್ರಸಾದ ಬಂದಿತ್ತು. ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ಕಾಲಮಿತಿ ಯಕ್ಷಗಾನ ಸೇವೆ ನಡೆಯುತ್ತಿದೆ.
ದೇವಸ್ಥಾನದ ಸಭಾಂಗಣದಲ್ಲಿ ಎರಡು ರಂಗಸ್ಥಳ ಗಳನ್ನು ಹಾಕಲಾಗಿದ್ದು ಏಕಕಾಲದಲ್ಲಿ ಪ್ರಸಂಗ ನಡೆಯುವುದು ಯಕ್ಷಗಾನ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. ಮೂರು ತಿಂಗಳುಗಳ ಕಾಲ ನಿರಂತರವಾಗಿ ಯಕ್ಷಗಾನ ಸೇವೆ ಮಂದಾರ್ತಿಯಲ್ಲಿ ನಡೆಯಲಿದೆ. ಸುತ್ತಮುತ್ತಲ ಯಕ್ಷಗಾನ ಪ್ರೇಕ್ಷಕರು ಪುಣ್ಯ ಕಥಾಭಾಗವನ್ನು ಪ್ರತಿದಿನ ಶ್ರೀಕ್ಷೇತ್ರದಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಯಕ್ಷಗಾನ ಹರಕೆ ಆಟ ಆಡಿಸುತ್ತಾರೆ. ಮುಂದಿನ 20 ವರ್ಷಕ್ಕೂ ಹೆಚ್ಚಿನ ಹರಕೆ ಯಕ್ಷಗಾನ ಬುಕ್ ಆಗಿರೋದು ಇಲ್ಲಿನ ವಿಶೇಷ..