
ತಿಂಡಿ ತಿಂದ ಬಿಲ್ ಕೇಳಿದ ಹೋಟೆಲ್ ಮಾಲಕ; ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಗ್ರಾಹಕ
Wednesday, July 6, 2022
ತಿಂಡಿ ತಿಂದ ಗ್ರಾಹಕನಲ್ಲಿ, ಹೊಟೇಲ್ ಮಾಲಕ ಬಿಲ್ ಕೇಳಿದಾಗ ಹಲ್ಲೆ ನಡೆಸಿ ಪಿಸ್ತೂಲ್ ನಂತಹ ವಸ್ತು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಸಂಬಂಧಿಸಿ ಆರೋಪಿ ಕಾರ್ಕಳದ ಮುಹಮ್ಮದ್ ಅನ್ವರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಪಾಲದಲ್ಲಿರುವ ಭಟ್ಕಳ ಮೂಲದ ಮುರ್ಡೇಶ್ವರದ ಹಬೀಬುಲ್ಲಾ ಎಂಬವರ ಹೋಟೆಲ್ ಗೆ ಕಾರಿನಲ್ಲಿ ಬಂದಿದ್ದ ಅನ್ವರ್ ಎಂಬಾತ, ಹಣ ಪಾವತಿಸದೇ ಕಾರಿನ ಬಳಿ ಹೋದಾಗ , ಈ ವೇಳೆ ಬಿಲ್ ಪಾವತಿಸುವಂತೆ ಸೂಚಿಸಿದ ಮಾಲಕ ಹಬೀಬುಲ್ಲಾಗೆ, ಅನ್ವರ್ ಕೈಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ ತರಹ ಇರುವ ಒಂದು ವಸ್ತುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ
ದೂರಿನಲ್ಲಿ ತಿಳಿಸಲಾಗಿದೆ.