
UDUPI : ಲಾಡ್ಜ್‌ನಲ್ಲಿ ಯುವಕ ಯುವತಿ -ಪೊಲೀಸರ ವಶಕ್ಕೆ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಲಾಡ್ಜ್ ವೊಂದರಲ್ಲಿ ಯುವಕನ ಜೊತೆ ಯುವತಿ ಇರುವ ವಿಚಾರ ತಿಳಿದ ಸಂಘಟನೆಯೊಂದರ ಕಾರ್ಯಕರ್ತರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ಉಪ್ಪುಂದದ ಲಾಡ್ಜ್ ಒಂದಕ್ಕೆ ಉಳ್ಳಾಲದ ಉಳ್ಳಾಲ ಬೈಲು ನಿವಾಸಿ ಮತ್ತು ಯುವತಿ ಜೊತೆ ಆಗಮಿಸಿದ್ದರು ಎನ್ನಲಾಗಿದೆ.ಈತ ಗುಜರಿ ವ್ಯಾಪಾರಿಯಾಗಿದ್ದು, ಮಂಗಳೂರು ಮೂಲದವನು,
ಯುವತಿ ಆತನದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು, ಇಬ್ಬರು ಬೈಂದೂರು ಪೊಲೀಸರ ವಶದಲ್ಲಿದ್ದಾರೆ.