UDUPI : ಹೊಂಡ ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಪತ್ರಕರ್ತ
Friday, July 22, 2022
ಉಡುಪಿ ಜಿಲ್ಲೆಯ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಕಲ್ಲಾಪು ಸಮೀಪ ಹೊಂಡ ತಪ್ಪಿಸಲು ಹೋದ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದಿದ್ದು ಪತ್ರಕರ್ತ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಪಡುಬಿದ್ರೆಯ ಪತ್ರಕರ್ತ ಹಮೀದ್ ಪಡುಬಿದ್ರೆ ತಮ್ಮ ಸ್ವಿಫ್ಟ್ ಕಾರನ್ನು ಉಡುಪಿಯಿಂದ ಪಡುಬಿದ್ರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಹೊಂಡವನ್ನು ತಪ್ಪಿಸಲು ಹೋದ ಪರಿಣಾಮ ಅವರ ಕಾರು ರಸ್ತೆಯಿಂದ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಕಾರು ನಜ್ಜುಗುಜ್ಜಾಗಿದ್ದರೂ ಹಮೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.