
UDUPI : ಕುಂದಾಪುರದ ಬಡವರ ಡಾಕ್ಟರ್ ಡಾ. ಎ.ಎಸ್. ಕಲ್ಕೂರ ವಿಧಿವಶ
Saturday, July 9, 2022
ಉಡುಪಿಯ ಕುಂದಾಪುರ ಭಾಗದಲ್ಲಿ ಬಡವರ ಡಾಕ್ಟರ್' ಅಂತಪ್ರಸಿದ್ಧಿ ಪಡೆದಿದ್ದ, ಹಂಗಳೂರಿನ ಡಾ. ಎ.ಎಸ್. ಕಲ್ಕೂರ (87) ಅವರು ವಯೋ ಸಹಜ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಆರಂಭದಲ್ಲಿ ಸರಕಾರಿ ವೈದ್ಯರಾಗಿ ವಿವಿಧೆಡೆ ಸೇವೆ ಸಲ್ಲಿಸಿದ್ದ, ಡಾ. ಎ.ಎಸ್. ಕಲ್ಕೂರ ಬಳಿಕ ಕುಂದಾಪುರ ನಗರದಲ್ಲಿ ತಾವೇ ಸ್ವತಃ ಪುಟ್ಟದಾದ ಕ್ಲಿನಿಕ್ ತೆರೆದು, 10 ರೂ., 20 ರೂ., 30 ರೂ.ನಷ್ಟು ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆಯೊಂದಿಗೆ, ಔಷಧಿ ನೀಡುವ ಮೂಲಕ "ಬಡವರ ವೈದ್ಯ"ರೆಂದೇ ಹೆಸರುವಾಸಿಯಾಗಿದ್ದರು. ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಬಡವರ ಸೇವೆಗೆ ತಮ್ಮ ವೈದ್ಯಕೀಯ ವೃತ್ತಿಯನ್ನು ಮುಡಿಪಾಗಿಟ್ಟಿದ್ದರು.