UDUPI : ಶತಮಾನದ ಎತ್ತಿನ ಗಾಡಿ
Friday, July 15, 2022
ಕರವಾಳಿಯಲ್ಲಿ ಅಪರೂಪ ಎಂಬಂತೆ ಉಡುಪಿಯ ಪರ್ಕಳ ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ ಅವರ ಮನೆಯಲ್ಲಿ ಶತಮಾನದ ಮೂರು ತಲೆಮಾರು ಕಂಡ ಎತ್ತಿನ ಗಾಡಿಯೊಂದು ಜನರ ಆಕರ್ಷಣೆಗೆ ಕಾರಣವಾಗಿದೆ.
ಶತಮಾನದ ಹಿಂದೆ ಬೈಲೂರು ಕಾರ್ಕಳ, ಹೆಬ್ರಿ, ಉಡುಪಿ ಮೊದಲಾದ ಕಡೆ ಸಂತೆ ನಡೆಯುವಲ್ಲಿ ಅಕ್ಕಿ ಮೂಟೆ,ದಿನಸಿ ಸಾಂಬಾರು ಪದಾರ್ಥ,ಬೆಲ್ಲದ ಡಬ್ಬಿ, ಒಡೆದಕಟ್ಟಿಗೆ, ತೆಂಗಿನಕಾಯಿ, ಬೈ ಹುಲ್ಲು ತರಕಾರಿ ಮೊದಲವುಗಳನ್ನ ಮೂಟೆ ಮೂಟೆ ಎತ್ತಿನ ಬಂಡಿಯ ಮೂಲಕ ಸರಬರಾಜು ಮಾಡಿ ಒಂದು ಕುಟುಂಬದ ಜೀವನಾಡಿಯಾಗಿತ್ತು. ಮೂರು ತಲೆಮಾರುಗಳನ್ನು ಕಂಡ ಎತ್ತಿನಗಾಡಿ, ಇಂದಿಗೂ ದಿನೇಶ್ ಶೆಟ್ಟಾಗಾರ್ ಅವರು ತಮ್ಮ ಮನೆಯ ಮುಂದೆ ಇಟ್ಟಿದ್ದಾರೆ.