UDUPI : ಟೈಲರಿಂಗ್ ಅಂಗಡಿಯಲ್ಲಿ ಸಿದ್ದವಾಗಿತ್ತು ಬೈಂದೂರು ಮರ್ಡರ್ ಪ್ಲಾನ್
Friday, July 15, 2022
ಬೈಂದೂರಿನ ಗ್ರಾಮದ ಹೇನ್ ಬೇರು ಎಂಬಲ್ಲಿ ಕಾರು ಸುಟ್ಟು ವ್ಯಕ್ತಿಯನ್ನು ಕೊಲೆ ಮಾಡುವ ಪ್ಲ್ಯಾನ್ ರೂಪಿಸಿದ್ದು ಪ್ರಕರಣದ ಪ್ರಥಮ ಆರೋಪಿ ಸದಾನಂದ ಶೇರಿಗಾರ್ ಅವರ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಅಂತ ಎಎಸ್‌ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ. ಆರೋಪಿ ಸತೀಶ್ ದೇವಾಡಿಗ ಎನ್ನುವವನ ಟೈಲರಿಂಗ್ ಅಂಗಡಿಯಲ್ಲೇ ಕುಳಿತು ಕೊಲೆ ಪ್ರಕರಣದ ಪ್ಲ್ಯಾನ್ ಸಿದ್ದ ಪಡಿಸಲಾಗಿತ್ತು ಅಂತ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ. ಸದಾನಂದ ಶೇರಿಗಾರ್ ಜಾಗ ಹಾಗೂ ಹಣದ ವಿಚಾರದ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದು, ಆ ವಿಚಾರದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು ಆದರೆ ಇದು ಸಾಧ್ಯವಾಗದೇ ಇದ್ದುದರಿಂದ ತನ್ನ ಗೆಳತಿ ಶಿಲ್ಪಾ ಹಾಗೂ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ರಲ್ಲಿ ಸಮಸ್ಯೆಯನ್ನು ಹೇಳಿಕೊಂಡಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಹೇಳಿದ್ದ ಎನ್ನಲಾಗಿದೆ.
ಈ ವೇಳೆ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಬಾವನಿಗೆ ಧೈರ್ಯ ಹೇಳಿದ್ದು ಮಲಯಾಳಂ ಚಿತ್ರ ಕುರೂಪ್ ಕಥೆಯನ್ನು ಆಧರಿಸಿ ಕೊಲೆ ಸಂಚನ್ನು ರೂಪಿಸುತ್ತಾರೆ. ಶಿಲ್ಪಾ ತನ್ನ ಪರಿಚಯಸ್ಥ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗನಿಗೆ ತನ್ನ ಮನೆಗೆ ಕರೆಯಿಸಿ ಕಂಠ ಪೂರ್ತಿ ಮಧ್ಯವನ್ನು ಕುಡಿಸಿ ಅದರೊಂದಿಗೆ ಲೈಂಗಿಕ ಸುಖ ನೀಡುವ ಮಾತ್ರೆ ಎಂದು ನಂಬಿಸಿ ನಿದ್ದೆ ಬರಿಸುವ ಮಾತ್ರೆ ನುಂಗಿಸಿ ಆತ ಸಂಪೂರ್ಣ ನಿದ್ರೆಗೆ ಹೋದ ಬಳಿಕ ಸದಾನಂದ ಸೇರಿಗಾರ್ ಅವರಿಗೆ ಬರ ಹೇಳಿ ಆತನನ್ನು ಕಾರಿನಲ್ಲಿ ಹಾಕಿ ಶಿಲ್ಪಾ ಮತ್ತು ಸದಾನಂದ ಶೇರಿಗಾರ್ ಬೈಂದೂರಿಗೆ ತೆರಳಿದ್ದಾರೆ. ಇನ್ನೊಂದು ಕಾರಿನಲ್ಲಿ ಸದಾನಂದ ಶೇರಿಗಾರ್ ಅವರ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಬಂದಿದ್ದಾರೆ ಅಂತ ಎಎಸ್‌ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.