
UDUPI : ಕವರ್ ಸಹಿತ ಚಾಕಲೇಟ್ ತಿಂದು ಬಾಲಕಿ ಸಾವು
ಚಾಕೊಲೇಟನ್ನು ಕವರ್ ಸಹಿತ ತಿಂದು ಬಾಲಕಿಯೊಬ್ಬಳು ಸಾವನ್ಪಿದ ಘಟನೆ ಉಡುಪಿಯ ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ನಡೆದಿದೆ. ಎರಡನೇ ತರಗತಿ ವಿದ್ಯಾರ್ಥಿನಿ ಸಮನ್ವಿ ಸಾವನ್ಪಿದ ಬಾಲಕಿ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಸಮನ್ವಿ, ಬೆಳಗ್ಗೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. ಈ ವೇಳೆ ತಾಯಿ, ಸಮಧಾನಪಡಿಸಲು ಚಾಕಲೇಟ್ ನೀಡಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಾಹನ ಬಂದಿದ್ದು, ವಿದ್ಯಾರ್ಥಿನಿ ಕವರ್ ಸಹಿತ ಚಾಕಲೇಟ್ ನುಂಗಿದ್ದಾಳೆ. ಚಾಕಲೇಟ್ ಗಂಟಲಲ್ಲಿ ಸಿಲುಕಿಕೊಂಡು, ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯದಿದ್ದರು. ಆದರೆ, ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..