
ಮಹಿಳೆಯರಂತೆ Dress ಧರಿಸಿ ದೇವಸ್ಥಾನಕ್ಕೆ ಬಂದು ಈ ಮಾಡುತ್ತಿದ್ದದ್ದೇನು?
ಕೊಡಗು: ಮಹಿಳೆಯರಂತೆ ಡ್ರೆಸ್ ಧರಿಸಿ ದೇವಸ್ಥಾನಕ್ಕೆ ಹೋಗಿ ಬಳಿಕ ಅಲ್ಲಿ ಕಳ್ಳತನ ನಡೆಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದು, ಬಂಧಿತನನ್ನು ಬಂಧಿತನನ್ನು ಕೂಡುಮಂಗಳೂರು ನಿವಾಸಿ ಮಹಮ್ಮದ್ ಗೌಸ್ ಎಂದು ಗುರುತಿಸಲಾಗಿದೆ.
ಮಹಮ್ಮದ್ ಗೌಸ್ ಕಳೆದ ನಾಲ್ಕು ದಿನಗಳ ಹಿಂದೆ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿರುವ ಕಾಣಿಕೆ ಡಬ್ಬವನ್ನು ಹಾರೆಯಿಂದ ತೆರೆದು ಹಣ ಕಳವು ಮಾಡಿದ್ದ. ಇದು ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಸುಳಿವಿನ ಮೇರೆಗೆ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಈತ ಮಹಿಳೆಯರಂತೆ ಡ್ರೆಸ್ ತೊಟ್ಟು ಶ್ರೀ ಉದ್ಭವ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿದ್ದಾನೆ. ಬಳಿಕ ಅಲ್ಲಿ ತಾನು ತಂದಿದ್ದ ಕಬ್ಬಿಣದ ಹಾರೆಯಿಂದ ಕಾಣಿಕೆ ಡಬ್ಬಿ ತೆರೆದು ಹಣ ಕದ್ದಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇವೆಲ್ಲ ದೃಶ್ಯಗಳೂ ದೇಗುಲದಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.