UDUPI : ಅಕ್ರಮ ಜಾನುವಾರು ಸಾಗಾಟ ; ಓರ್ವ ಸೆರೆ, ಮತ್ತೋರ್ವ ಪರಾರಿ
Monday, July 4, 2022
ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ
ವಾಹನವನ್ನು ಬೆನ್ನಟ್ಟಿ ಓರ್ವನನ್ನು ಸೆರೆ ಹಿಡಿದಿರುವ ಘಟನೆ
ಉಡುಪಿ ಜಿಲ್ಲೆಯ ಹೆಬ್ರಿಯ ಚಾರಾದಲ್ಲಿ ನಡೆದಿದೆ.
ಹೆಬ್ರಿ ಪೊಲೀಸರಿಗೆ ವಾಹನ ತಪಾಸಣೆ ಮಾಡುತ್ತಿರುವಾಗ, ಬೇಳಂಜೆ ಕಡೆಯಿಂದ ಒಂದು ಕಾರು ಅತೀವೇಗವಾಗಿ ಬರುತ್ತಿರುವುದನ್ನು ನೋಡಿ ನಿಲ್ಲಿಸುವಂತೆ ಸೂಚನೆ ನೀಡಿದ್ದರೂ, ಚಾಲಕನು ನಿಲ್ಲಿಸದೇ ಹೆಬ್ರಿ ಕಡೆಗೆ ಅತೀವೇಗವಾಗಿ ಚಲಾಯಿಸಿದ್ದಾನೆ. ಹೀಗಾಗಿ ಅನುಮಾನ ಬಂದು ತಮ್ಮ ವಾಹನ ಬೆನ್ನಟ್ಟಿದಾಗ, ಚಾಲಕನು ಚಾರಾ ಸರ್ಕಲ್ ಬಳಿಯ ಕರೆಬೆಟ್ಟು ಮಹಾಲಿಂಗ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಕಾರು ನಿಲ್ಲಿಸಿ ತಪ್ಪಿಸಿಕೊಂಡಿದ್ದಾನೆ.
ಕಾರಿನಲ್ಲಿದ್ದ ಶಕೀಲ್ ಅಹಮ್ಮದ್ ಟಿ.ಕೆ ನನ್ನು ಸೆರೆ ಹಿಡಿದಿದ್ದು, ಅಕಿಲ್ ಅಹ್ಮಮದ್ ಕಾಡಿಗೆ ಓಡಿ ತಪ್ಪಿಸಿಕೊಂಡಿದ್ದಾನೆ. ಕಾರನ್ನು ಪರಿಶೀಲಿಸಿದಾಗ, ಕಾರಿನ ಒಳಗಡೆ ಎರಡು ಜಾನುವಾರುಗಳು ಇದ್ದು, ಅದರಲ್ಲಿ ಒಂದು ಜಾನುವಾರು ಮೃತಪಟ್ಟಿತ್ತು. ಬೇಳಂಜೆ ಗ್ರಾಮದ ಈಸರಗದ್ದೆ ಎಂಬಲ್ಲಿ ರಸ್ತೆಯ ಬದಿಯಲ್ಲಿದ್ದ ಜಾನುವಾರುಗಳನ್ನು ಕಳವು ಮಾಡಿ ಕಾರಿನಲ್ಲಿ ಅವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಬಗ್ಗೆ ಕಸಾಯಿಖಾನೆಗೆ ಕೊಂಡು ಹೋಗುತ್ತಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.