UDUPI : ಬಂಧನದಿಂದ ತಪ್ಪಿಸಿಕೊಳ್ಳಲು ಅಮಾಯಕನನ್ನು ಕೊಲೆ ಮಾಡಿದ..!
Thursday, July 14, 2022
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ, ಕಾರು ಸುಟ್ಟು ಕರಕಲಾಗಿ, ಕಾರಿನೊಳಗೆ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣ ಭೇದಿಸಿ ಪೊಲೀಸರ ಆರೋಪಿಗಳನ್ನು ಬಂಧಿಸಿದ್ದಾರೆ. ಸದಾನಂದ ಶೇರ್ವೆಗಾರ್ ಶಿಲ್ಪ ಸಾಲಿಯಾನ್, ಸತೀಶ ದೇವಾಡಿಗ, ನಿತಿನ್ ದೇವಾಡಿಗ ಬಂಧಿತ ಕೊಲೆ ಆರೋಪಿಗಳು. ಆನಂದ ದೇವಾಡಿದ ಕೊಲೆಯಾದ ವ್ಯಕ್ತಿ. ಎರಡು ದಿನಗಳ ಹಿಂದೆ, ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕಾರು ಸುಟ್ಟು, ಕಾರಿನೊಳಗೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆಯ ಪ್ರಮುಖ ಆರೋಪಿ ಸದಾನಂದ ಶೇವೆಗಾರ್‌ನನ್ನು ಬಂಧಿಸಿದ್ದಾರೆ..
ಕಾರ್ಕಳ ಮೂಲದ ಈತ ಕಾರ್ಕಳದಲ್ಲಿ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಪೋರ್ಜರಿ ಕೇಸೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿ ಈತನಿಗೆ ಸಮನ್ಸ್ ಕೂಡ ನೀಡಲಾಗಿತ್ತು. ಹೀಗಾಗಿ ತಾನು ಬಂಧನದಿಂದ ತಪ್ಪಿಸಿಕೊಳ್ಳು, ಅಮಾಯಕನನ್ನು ಬಲಿಕೊಟ್ಟಿದ್ದ. ತನ್ನ ಪರಿಚಯದ ಆನಂದ ದೇವಾಡಿಗ ಎಂಬ ವ್ಯಕ್ತಿಗೆ ನಿದ್ರೆ ಮಾತ್ರೆ ಕೊಟ್ಟು ತನ್ನದೇ ಕಾರಿನಲ್ಲಿ ಬೈಂದೂರಿನ ಹೇನ್ಬೇರ್ ಎಂಬಲ್ಲಿ ಕರೆದುಕೊಂಡು ಹೋಗಿ, ಆನಂದ ದೇವಾಡಿಗ ಅವರನ್ನು ಕಾರಿನಲ್ಲಿ ಇಟ್ಟು ತನ್ನದೇ ಕಾರನ್ನು ಸುಟ್ಟು ಹಾಕಿದ. ಈ ಮೂಲಕ ಕಾರು ಸುಟ್ಟು ತಾನು ಸತ್ತಿದ್ದೇನೆ ಅಂತ, ಬಂಧನ ಆರೋಪದದ ತಪ್ಪಿಸಿಕೊಳ್ಳಲು ಈ ರೀತಿಯ ಸಿನಿಮೀಯ ಉಪಾಯ ರೂಪಿಸಿದ್ದ.
ಆದ್ರೆ ಪೊಲೀಸರು ಈ ಘಟನೆ ಬಗ್ಗೆ ಅನುಮಾನದಿಂದ ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದ್ದು, ಕೊಲೆ ಆರೋಪದಲ್ಲಿ ಸದಾನಂದ ಶೇರಿಗಾರ್ ಹಾಗೂ ಕೊಲೆಗೆ ಸಹಕರಿಸಿದ, ಶಿಲ್ಪ ಸಾಲಿಯಾನ್, ಸತೀಶ ದೇವಾಡಿಗ, ನಿತಿನ್ ದೇವಾಡಿಗ ಎಂಬುವವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.