
UDUPI : ಹಾಡ ಹಗಲೇ ಮನೆ ಬೀಗ ಮುರಿದು ಆಭರಣ ಕಳವು
Friday, July 1, 2022
ಯಾರು ಇಲ್ಲದಾಗ ಮನೆಗೆ ನುಗ್ಗಿದ ಖದೀಮರು, ಹಾಡ ಹಗಲೇ 90 ಸಾವಿರ ಮೌಲ್ಯದ ಚಿನ್ನಹಾಗೂ ಬೆಳ್ಳಿಯ ಆಭರಣಗಳನ್ನು ಕಳವುಗೈದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೇರಾಡಿಯಲ್ಲಿ ನಡೆದಿದೆ.
ಸರಕಾರಿ ಸಂಘದ ಉದ್ಯೋಗಿಯಾಗಿರುವ, ಸಂಗೀತಾ ಕೆಲಸಕ್ಕೆ ಹೋಗುವಾಗ ಬೀಗ ಹಾಕಿಕೊಂಡು ತೆರಳಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ, ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.
ಮನೆಯ ಬಾಗಿಲಿನ ಚಿಲಕ ಮುರಿದು, ಮನೆಯ ಒಳ ನುಗ್ಗಿದ ಕಳ್ಳರು, ಕಬ್ಬಿಣದ ಟ್ರಂಕ್ ಮುರಿದು, 90 ಸಾವಿರ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.