
UDUPI- ಮಲಯಾಳಂ ಸಿನಿಮಾ ಪ್ರೇರಣೆಯಲ್ಲಿ ನಡೆಯಿತು ಕೊಲೆ- ಪ್ರಿಯತಮೆ ಶಿಲ್ಪಾ ಜೊತೆಗೆ ಸೇರಿಕೊಂಡು ಮಾಡಿದ PLAN ಹೀಗಿತ್ತು...
Friday, July 15, 2022
ಉಡುಪಿ; ಉಡುಪಿಯಲ್ಲಿ ಮಲಯಾಳದ ಸಿನಿಮಾ ಶೈಲಿಯಲ್ಲಿ ಕೊಲೆಯೊಂದು ನಡೆದಿದ್ದು, ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉಡುಪಿಯ ಬೈಂದೂರಿನ ಮರ್ಡರ್ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿಗಳು ಮಲಯಾಳಂ ಸಿನಿಮಾ ಕುರುಪ್ ನಂತೆ ಕೊಲೆಗೆ ಪ್ಲ್ಯಾನ್ ಮಾಡಿದ್ದು ತಿಳಿದುಬಂದಿದೆ.
ಜೂನ್ 13 ರಂದು ಉಡುಪಿಯ ಬೈಂದೂರಿನ ಹೇನ್‌ಬೇರಿನಲ್ಲಿ
ಕಾರು ಸುಟ್ಟ ಘಟನೆ ನಡೆದಿತ್ತು. ಇದರಲ್ಲಿ ಓರ್ವ ವ್ಯಕ್ತಿಯ ಶವ ಸಿಕ್ಕಿದ್ದು, ಇದನ್ನು ಬೆನ್ನಟ್ಟಿದ ಪೊಲೀಸರ ದೊಡ್ಡ ಪ್ಲ್ಯಾನ್ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.
ಬೈಂದೂರಿನಲ್ಲಿ ಕಾರು ಸುಟ್ಟು ವ್ಯಕ್ತಿಯ ಕೊಲೆಗೆ ಮಲಯಾಳಂ ಸಿನಿಮಾ ಕುರುಪ್ ಪ್ರೇರಣೆ ಅಂತ ತಿಳಿದುಬಂದಿದೆ.ಕ್ರೈಂ ಸ್ಟೋರಿ, ಕ್ರೈಂ ಹಿನ್ನೆಲೆಯ ಸಿನಿಮಾಗಳನ್ನು ನೋಡುತ್ತಿದ್ದ ಕೊಲೆಗಾರ ಸದಾನಂದ ಶೇರೆಗಾರ್ ಈ ಕೊಲೆ ಮಾಡಿದ್ದಾನೆ.
ಪೋರ್ಜರಿ ಆರೋಪದಲ್ಲಿ ಜೈಲು ಪಾಲಾಗುವ ಆತಂಕದಲ್ಲಿದ್ದ
ಸದಾನಂದ ಶೇರೆಗಾರ್ ತಾನು ಬಜಾವಾಗಲು ಸಿನಿಮೀಯ ಮಾದರಿಯಲ್ಲಿ ಅಮಾಯಕ ಆನಂದ ದೇವಾಡಿಗನ ಕೊಲೆ ಸಂಚು ರೂಪಿಸಿದ್ದ. ಪ್ರಿಯತಮೆ ಶಿಲ್ಪಾ ಮೂಲಕ ತನ್ನನ್ನೇ ಹೋಲುವ ಆನಂದ ದೇವಾಡಿಗ ಜೊತೆಗೆ ಪ್ರೀತಿಯ ನಾಟಕವಾಡುವಂತೆ ಮಾಡಿದ್ದ.ಶಿಲ್ಪಾ, ಸಲುಗೆ ನಾಟಕವಾಡಿ ಆನಂದ ದೇವಾಡಿಗನಿಗೆ ಮದ್ಯ ಕುಡಿಸಿ ಅದರಲ್ಲಿ ನಿದ್ರೆ ಮಾತ್ರೆ ಬೆರಕೆ ಮಾಡಿದ್ದಳು.ನಂತರ ಕಾರ್ಕಳದಿಂದ ಸದಾನಂದ, ಆನಂದ ದೇವಾಡಿಗನನ್ನು ಬೈಂದೂರಿಗೆ ಕರೆ ತಂದಿದ್ದ .ಬೈಂದೂರಿನ ಹೇನ್‌ಬೇರಿನಲ್ಲಿ ಆನಂದ ದೇವಾಡಿಗನನ್ನು ಕಾರಿನಲ್ಲಿ ಕುಳಿರಿಸಿ ತನ್ನ ಕಾರಿಗೆ ತಾನೇ ಬೆಂಕಿ ಕೊಟ್ಟಿದ್ದಾನೆ. ನಂತರ ಬೇರೆ ಕಾರಲ್ಲಿ ಬಂದ ತನ್ನ ಸ್ನೇಹಿತರ ಜೊತೆಗೆ ಎಸ್ಕೇಪ್ ಆಗಿದ್ದಾನೆ.ತಾನೇ ಕಾರಿನಲ್ಲಿ ಹೊತ್ತಿ ಉರಿದು ಸತ್ತಿದ್ದೇನೆ ಅಂತ ರೂಪಿಸಲು ಈತ ಯೋಜಿಸಿದ್ದ.
ಟೋಲ್ ಗೇಟ್‌ನ ಸಿಸಿ ಟಿವಿಯೇ ತನಿಖೆಗೆ ಸಹಕಾರಿ ಆಗಿದೆ. ಈತನ ಪ್ರಿಯತಮೆ ಶಿಲ್ಪಾ ಟೋಲ್ ಗೇಟ್ ನಲ್ಲಿ ಇಳಿದು ಮತ್ತೆ ಕಾರು ಹತ್ತಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಸದಾನಂದ ಸೇರೆಗಾರ್ ನ ಕ್ರಿಮಿನಲ್ ಬುದ್ದಿ ತಿಳಿದು ಬಂದಿದೆ.
ಸದಾನಂದನಿಗೆ ಕೊಲೆ ಸಹಕಾರ ನೀಡಿದ ಆರೋಪದಲ್ಲಿ ಶಿಲ್ಪಾ ಸಾಲಿಯಾನ್, ಸತೀಶ್ ದೇವಾಡಿಗ ನಿತಿನ್ ದೇವಾಡಿಗ ಬಂಧಿತರಾಗಿದ್ದಾರೆ.