
ಹಜ್‌ನಿಂದ ಮರಳಿದ ಯಾತ್ರಿಕರನ್ನು ಆರತಿ ಎತ್ತಿ ಸ್ವಾಗತಿಸಿದ ಕಾಶ್ಮೀರಿ ಹಿಂದುಗಳು
ಶ್ರೀನಗರ: ಈ ಬಾರಿಯ ಹಜ್ ತೀರ್ಥಯಾತ್ರೆ ಮುಗಿಸಿ ಮರಳಿದವರನ್ನು ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಪಂಡಿತರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ತಂಡದಲ್ಲಿ ಒಟ್ಟು 145 ಹಜ್ ಯಾತ್ರಿಕರು ಇದ್ದು ಅವರನ್ನು ಕಾಶ್ಮೀರಿ ಪಂಡಿತರು ಆರತಿ ಎತ್ತಿ ಮತ್ತು ನಾಥ್ (ಮುಸ್ಲಿಂ ಸೂಫಿ ಆಧ್ಯಾತ್ಮಿಕ ಗಾಯನ) ಹಾಡಿ ಸ್ವಾಗತಿಸಿದರು.
ಹಜ್ ಯಾತ್ರಿಕರನ್ನು ಹಸ್ತಲಾಘವ ಮಾಡಿ ಆಲಿಂಗನ ಮಾಡಿ ಬರ ಮಾಡುವುದರ ಜೊತೆಗೆ ಪರಸ್ಪರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸದ್ಯ ಈ ವೀಡಿಯೋ ದೇಶಾದ್ಯಂತ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.