ಪಂಚತಾರಾ ಹೋಟೆಲ್ ನ ಮಹಿಳಾ ಸಿಬ್ಬಂದಿಯನ್ನು washroomನಲ್ಲಿ ಅತ್ಯಾಚಾರ ಗೈದ ಅಪ್ರಾಪ್ತ
ಡೆಹ್ರಾಡೂನ್: ಅಪ್ರಾಪ್ತ ಬಾಲಕನೊಬ್ಬ ಪಂಚತಾರ ಹೋಟೆಲ್ನಲ್ಲಿ ಹೌಸ್ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ.
15 ವರ್ಷದ ಬಾಲಕ ಹೋಟೆಲ್ನ ಮಹಿಳೆಯರ washroomನಲ್ಲಿ ಪಶ್ಚಿಮ ಬಂಗಾಳದ 24 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತ ಮಹಿಳೆಯು ಲೇಡಿಸ್ ವಾಶ್ರೂಮ್‌ನಲ್ಲಿದ್ದ ವೇಳೆ ಆರೋಪಿಯು ಅಲ್ಲಿಗೆ ಬಂದಿದ್ದು, ನಂತರ ಅವಳನ್ನು ಮಾತನಾಡಿಸಲು ಪ್ರಾರಂಭಿಸಿದ್ದಾನೆ.
ಈ ವೇಳೆ ಸಂತ್ರಸ್ತೆ, ಮಹಿಳೆಯರ ಶೌಚಾಲಯಕ್ಕೆ ಪ್ರವೇಶಿಸಿದ್ದಕ್ಕೆ ಆತನನ್ನು ಪ್ರಶ್ನಿಸಿದ್ದಾಳೆ. ನಂತರ ಕೂಡಲೇ ಹೊರ ಹೋಗುವಂತೆ ತಾಕೀತು ಮಾಡಿದ್ದಾಳೆ.
ಆದರೆ ಆತ ಆ ವಾಶ್ರೂಂನ ಬಾಗಿಲನ್ನು ಹಾಕಿ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಸಹಾಯಕ್ಕಾಗಿ ಕೂಗಿದ್ದರೂ, ಬಾಗಿಲು ಮುಚ್ಚಿದ್ದರಿಂದ ಯಾರಿಗೂ ಕೇಳಿರಲಿಲ್ಲ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.