
UDUPI : ಒಂದೇ ಬುಲೇಟ್‌ನಲ್ಲಿ ಪ್ರಮೋದ್, ರಾಘುಪತಿ ಭಟ್ ರ‌್ಯಾಲಿ ರೈಡ್
Sunday, June 19, 2022
ಒಂದು ಕಾಲದ ರಾಜಕೀಯದಲ್ಲಿ ಬದ್ದ ವೈರಿಗಳಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಶಾಸಕ ರಘುಪತಿ ಭಟ್ ಇದೀಗ ಭಾಯಿ ಭಾಯಿಯಾಗಿ ಎಲ್ಲ ಕಡೆಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮೋದಿ ಸರಕಾರಕ್ಕೆ ೮ ವರ್ಷ ತುಂಬಿದ ಹಿನ್ನೆಲೆ ಉಡುಪಿ ಬಿಜೆಪಿ ಗ್ರಾಮಾಂತರ ಘಟಕ ಬ್ರಹ್ಮಾವರದಲ್ಲಿ ಆಯೋಜಿಸಿದ ಬೈಕ್ ರ‌್ಯಾಲಿಯಲ್ಲಿ, ಒಂದೇ ಬೈಕ್‌ನಲ್ಲಿ ಜೊತೆಯಾಗಿ ಭಾಗವಹಿಸಿದರು. ರಘುಪತಿ ಭಟ್ ಬುಲೆಟ್ ರೈಡ್ ಮಾಡಿದ್ದು, ಪ್ರಮೋದ್ ಹಿಂಬದಿ ಕುಳಿತ್ತಿದ್ದರು. ಶಾಲಾ ಜೀವನದಲ್ಲಿ ಕ್ಲಾಸ್ ಮೇಟ್‌ಗಳಾಗಿದ್ದ ಇಬ್ಬರು ರಾಜಕೀಯದಲ್ಲಿ ವಿರೋಧಿಗಳಾಗಿದ್ದರು. ಸದ್ಯ ಪ್ರಮೋದ್ ಬಿಜೆಪಿ ಸೇರಿ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತೊದ್ದಾರೆ.