UDUPI : ನನಗೆ ಗನ್ ಮ್ಯಾನ್ ಬೇಡ ; ಯಶ್‌ಪಾಲ್ ಸುವರ್ಣ
Thursday, June 9, 2022
ಬಿಜೆಪಿ ಮುಖಂಡ ಉಡುಪಿ ಯಶ್ ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕೊಲೆ ಬೆದರಿಕೆಗಳು ಬರುತ್ತಿದ್ದು, ಪೊಲೀಸ್ ಇಲಾಖೆ ಗನ್ ಮ್ಯಾನ್ ಪಡೆದುಕೊಳ್ಳವಂತೆ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಶ್‌ಪಾಲ್ ಸುವರ್ಣ, ಪೊಲೀಸ್ ಇಲಾಖೆ ಇಂದು ಗನ್ ಮ್ಯಾನ್ ಕಳುಹಿಸಿಕೊಟ್ಟಿದೆ. ನಾನು ಗನ್ ಮ್ಯಾನ್ ಸಂಸ್ಕೃತಿಯಲ್ಲಿ ಬೆಳೆದವ ಅಲ್ಲ. ಉಡುಪಿಯಲ್ಲಿ ಓಡಾಡುವಾಗ ಗನ್ ಮ್ಯಾನ್ ಬೇಡ ಎಂದಿದ್ದೇನೆ.ಈ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ. ಪೊಲೀಸ್ ಇಲಾಖೆ ಗನ್ ಮ್ಯಾನ್ ಪಡೆಯಲೇಬೇಕು ಎಂದು ಹೇಳಿದೆ. ಪೊಲೀಸ್ ಇಲಾಖೆ ತನ್ನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ನಮಗೆಲ್ಲಾ ಭದ್ರತೆ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ..