UDUPI : ಉಡುಪಿಯ ಮಲ್ಪೆ ಬೀಚ್‌ಗೆ ತಡೆಬೇಲಿ
Friday, June 10, 2022
ಉಡುಪಿಯ ಮಲ್ಪೆ ಬೀಚ್‌ಗೆ ನೀವು ಪ್ರವಾಸ ಬರೋದಿದ್ರೆ, ನಿಮ್ಗೆ ನಿರಾಸೆ ಆಗೋದಂತು ಕನ್ಪರ್ಮ್. ಯಾಕಂದ್ರೆ ಸಮುದ್ರ ಪ್ರಕ್ಷುಬ್ಧ ಆಗಿರೋ ಕಾರಣದಿಂದ ಜೀವ ಹಾನಿ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರವಾಸಿಗರ ಸುರಕ್ಷಿತೆ ದೃಷ್ಟಿಯಿಂದ ಬೀಚ್‌ಗೆ ತಡೆಬೇಲಿ ನಿರ್ಮಿಸಲಾಗಿದೆ. ಜೂನ್ ತಿಂಗಳಲ್ಲಿ ಕಡಲ ಅಲೆಗಳು ಜೋರಾಗಿದ್ದು ನೀರಿಗೆ ಇಳಿದ್ರೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇತ್ತೀಚೆಗೆ ಸಮುದ್ರ ಅಲೆಗಳ ಜೊತೆಗೆ ಆಟವಾಡುತ್ತಿದ್ದ ಕೆಲ ಪ್ರವಾಸಿಗರು ಸಮುದ್ರದ ಅಲೆಗಳಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ಅಲ್ಲದೇ ಪ್ರವಾಸಿಗರು ಬೀಚ್‌ನಲ್ಲಿ ಇರುವ ಲೈಫ್ ಗಾರ್ಡ್‌ಗಳ ಎಚ್ಚರಿಕೆಯನ್ನು ಮೀರಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದನ್ನು ಮನಗಂಡು ಮುಂದಿನ ಮೂರೂವರೆ ತಿಂಗಳ ವರೆಗೆ ಕಡಲಿಗೆ ಇಳಿಯೋದನ್ನು ನಿಷೇಧಿಸಿ ತಡೆಬೇಲಿ ನಿರ್ಮಾಣ ಹಾಕಲಾಗಿದೆ. ಮಲ್ಪೆ ಕಡಲಿಗೆ ಇಳಿಯುವ ದ್ವಾರದ ಬಳಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ 5 ಅಡಿಯಷ್ಟು ಎತ್ತರ ಬಲೆ ಅಳವಡಿಸಲಾಗಿದೆ. ಅಪಾಯವನ್ನು ಸೂಚಿಸಲು ಕೆಂಪು ಧ್ವಜವನ್ನು ಅಲ್ಲಲ್ಲಿ ಕಟ್ಟಲಾಗಿದೆ. ಸದ್ಯ ಬೀಚ್ ಇಳಿಯೋದಕ್ಕೆ ಅವಕಾಶ ಇಲ್ಲ ಅನ್ನೋ ಮಾಹಿತಿ ಇಲ್ಲದೇ ದೂರದ ಊರುಗಳಿಂದ ಬರುವ ಪ್ರವಾಸಿಗರು ನಿರಾಸೆ ಆಗುತ್ತಿದ್ದಾರೆ.