UDUPI: ಭತ್ತದ ಗದ್ದೆಯಲ್ಲಿ ಬೃಹತ್ ಗಾತ್ರದ ಮುಗುಡುಗಳು..!
Saturday, June 25, 2022
ಉಡುಪಿಯ ಕಟಪಾಡಿಯಲ್ಲಿ ಇರುವ ಭತ್ತದ ಗದ್ದೆಯೊಂದರಲ್ಲಿ, ಸಾವಿರಾರು ರೂ. ಬೆಲೆ ಬಾಳುವ ಮೀನುಗಳು ಪತ್ತೆಯಾಗಿದೆ.
ಮುಗುಡು ಜಾತಿಗೆ ಸೇರಿದ ಮೀನುಗಳು ಇದಾಗಿದೆ. ಕಡಪಾಡಿಯ ಕೋಟೆ ಅಂಬಾಡಿಯ ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಭತ್ತದ ಗದ್ದೆಯಲ್ಲಿ, ಭತ್ತದ ಸಸಿ ಕೀಳುತ್ತಿದ್ದ ಸಂದರ್ಭ ಗದ್ದೆಯಲ್ಲಿ ಬೃಹತ್ ಗಾತ್ರದ ಮುಗುಡು ಮೀನುಗಳು ಲಭಿಸಿದ್ದು, ಮೀನು ಪ್ರಿಯ ಕುಟುಂಬದಲ್ಲಿ ಸಂತಸ ತಂದಿದೆ. ದೊಡ್ಡ ಗಾತ್ರದ ಮುಗುಡುಗಳು ತಲಾ 10 ಕೆಜಿ ಇದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಬಾಳುತ್ತದೆ.