
UDUPI : ನ್ಯೂಯಾರ್ಕ್‌ನಲ್ಲಿ ಸತೀಶ್ ಆಚಾರ್ಯ ಕಲಾಕೃತಿ ಪ್ರದರ್ಶನ
Saturday, June 25, 2022
ಅಮೆರಿಕದ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆಯು ನ್ಯೂಯಾರ್ಕ್ ಸಿಟಿಯ ಪ್ರತಿಷ್ಠಿತ ಟೈಮ್ಸ್ ಸ್ಟೇರ್‌ನಲ್ಲಿ ಎನ್‌ಎಫ್‌ಟಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದು ಅದರಲ್ಲಿ ಉಡುಪಿಯ ಕುಂದಾಪುರದ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನಗೊಂಡಿದೆ.
ಪ್ರದರ್ಶನಕ್ಕೆ ವಿಶ್ವದ ಸಾವಿರಾರು ಕಲಾವಿದರು ಕಲಾಕೃತಿಗಳನ್ನು ಕಳುಹಿಸಿದ್ದರು. ಈ ಪೈಕಿ ಆಯ್ದ 200ರಷ್ಟು ಕೃತಿಗಳು ಟೈಮ್ಸ್ ಸ್ಟೇರ್‌ನ ಬಿಲ್‌ಬೋರ್ಡ್‌ನಲ್ಲಿ ಪ್ರದರ್ಶನಗೊಂಡಿದ್ದು, ಅದರಲ್ಲಿ ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ 'ಐ ಕೇರ್' ಹೆಸರಿನ ಎನ್‌ಎಫ್‌ಟಿ ಕಲಾಕೃತಿಯೂ ಸೇರಿದೆ.
ಸತೀಶ್ ಆಚಾರ್ಯ ಭಾರತದ ಹೆಸರಾಂತ ವ್ಯಂಗ್ಯಚಿತ್ರಕಾರರ ಸಾಲಿಗೆ ಸೇರಿದವರು. ವೃತ್ತಿಪರ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡು ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ.