UDUPI: ಯಂತ್ರಶ್ರೀ ಕಾರ್ಯಕ್ರಮಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆ
Tuesday, June 28, 2022
ರಾಜ್ಯದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದು ಉಡುಪಿ ಬಾರ್ಕೂರಿನಲ್ಲಿ ಚಾಲನೆ ನೀಡಿದರು. ಬಾರ್ಕೂರಿನ ಪ್ರಗತಿ ಪರ ಕೃಷಿಕ, ಶ್ರೀನಿವಾಸ ಉಡುಪರ ಭತ್ತದ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಭತ್ತದ ಸಸಿಗಳನ್ನು ನಾಟಿ ಯಂತ್ರಕ್ಕೆ ನೀಡಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವೀರೇಂದ್ರ ಹೆಗ್ಗಡೆಯವರು ಶುಭ ಕೋರಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಸಮ್ಮಾನ ನಡೆಯಿತು. ಅಲ್ಲದೇ ಕೃಷಿಯಲ್ಲಿ ಬಳಸಬಹುದಾದ ವಿವಿಧ ನಾಟಿ ಯಂತ್ರಗಳು, ಹಾಗೂ ಭತ್ತದ ಸಸಿಗಳ ಪ್ರಾತ್ಯಕ್ಷಿಕೆ ನಡೆಯಿತು.. ಉಡುಪಿ ಜಿಲ್ಲೆಯ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು..