ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳು ಕೃಷಿ, ವ್ಯಾಪಾರ ಇನ್ನಿತರ ಉದ್ದೇಶಕ್ಕೆ ಕಾಡು ನಾಶ ಆಗ್ತಾ ಇದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಹೆಬ್ರಿ,ಪೆರ್ಡೂರು, ಕಾರ್ಕಳ ಪರಿಸರವು ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಪರಿಸರಕ್ಕೆ ಮತ್ತೆ ಹಸಿರು ಹೊದಿಕೆ ಹೊದಿಸುವ ಕಾರ್ಯ ಕರಾವಳಿ ವಿವಿಧ ತಂಡಗಳು ಮಾಡುತ್ತಿದೆ. ಅಪರೂಪದ ಕಾರ್ಯಕ್ರಮವಾಗಿ ಗಿಡ ನೆಡುವುದರ ಜೊತೆಗೆ ಪರಿಸರ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ.
ಉಡುಪಿ ವಕೀಲರ ಸಂಘ, NECF ಮತ್ತು ಕಾನೂನು ಸೇವಾ ಪ್ರಾಧಿಕಾರ ಸಹಯೋಗದೊಂದಿಗೆ ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ ಕಾರ್ಯಕ್ರಮವನ್ನು ಪೆರ್ಡೂರಿನಲ್ಲಿ ನಡೆಯಿತು. ಪರಿಸರಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿ ಜಾಗೃತಿಮೂಡಿಸುವುದರೊಂದಿಗೆ 500 ಸಸಿ ನೆಡಲಾಯಿತು. .ಅಲ್ಲದೆ ಇದು ಇಲ್ಲಿಗೆ ಮುಗಿಯದೇ ಮುಂದಿನ 10 ಭಾನುವಾರ ನಿರಂತರವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯ 10 ಅರಣ್ಯ ವಲಯಗಳಲ್ಲಿ ನಡೆಯಲಿದೆ.