-->
ads hereindex.jpg
UDUPI:  ಜಿಲ್ಲೆಯಾದ್ಯಂತ ಉತ್ತಮ ಮಳೆ ; ಕೃಷಿ ಚಟುವಟಿಕೆ ಆರಂಭ

UDUPI: ಜಿಲ್ಲೆಯಾದ್ಯಂತ ಉತ್ತಮ ಮಳೆ ; ಕೃಷಿ ಚಟುವಟಿಕೆ ಆರಂಭ

ಉಡುಪಿ ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದೆ. ಜೂನ್ 20 ಆದ್ರೂ ಮಳೆ ಬಾರದೇ ರೈತರು ಆಕಾಶ ನೋಡುತ್ತಿದ್ದರು. ಸದ್ಯ ಉಡುಪಿ ಜಿಲ್ಲೆಯಾದ್ಯಂತ ದಿನವಿಡೀ ಉತ್ತಮ ಮಳೆ ಸುರಿಯುತ್ತಿದ್ದು ರೈತರು ಸಂಸತಗೊಂಡಿದ್ದಾರೆ.

ಕರೆ ಹಳ್ಳ ನದಿಗಳು ತುಂಬಿಕೊಂಡಿದ್ದು, ರೈತರು  ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಗದ್ದೆಯಲ್ಲಿ ಟ್ರಾಕ್ಟರ್ ಟಿಲ್ಲರ್ ಸುದ್ದು ಕೇಳಿಸುತ್ತಿದೆ. ಭತ್ತದ ಬೇಸಾಯಕ್ಕೆ ತಡವಾಗಿ ಆದ್ರೂ ಜೋರಾದ ತಯಾರಿ ನಡೆಯುತ್ತಿದೆ. 


ಹವಾಮಾನ ಇಲಾಖೆ ಮುನ್ಸೂಚನೆಯಂತೆ ಒಟ್ಟು ಐದು ದಿನಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಲಿದೆ. ಅರಬ್ಬೀ ಸಮಯದ್ರಗಳು ಈಗಾಗಲೇ ಪ್ರಕ್ಷುಬ್ಧವಾಗಿದ್ದು, ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಯಾಂತ್ರೀಕೃತ ಆಳ ಸಮುದ್ರ ಮೀನುಗಾರಿಕೆ ಈಗಾಗಲೇ ಸ್ಥಗಿತಗೊಂಡಿದ್ದು, ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತಿದೆ.

Ads on article

Advertise in articles 1

advertising articles 2