UDUPI : ಮಧ್ಯಪ್ರದೇಶ ಮೂಲದ ಖತರ್ನಾಕ್ ಕಳ್ಳರು ಅರೆಸ್ಟ್
Thursday, June 23, 2022
ಉಡುಪಿಯ ಜಿಲ್ಲೆಯ ಬೈಂದೂರಿನ ಅರೆ ಶಿರೂರುನಲ್ಲಿ ಬಸ್‌ನಲ್ಲಿ ಇದ್ದ, 18 ಲಕ್ಷ ರೂಪಾಯಿಯ ಚಿನ್ನ ಕಳ್ಳತನಕ್ಕೆ ಸಂಬಂಧಿಸಿದಂತೆ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಅಲೀಖಾನ್, ಅಮ್ಜತ್, ಇಕ್ರಾರ್ ಖಾನ್, ಗೋಪಾಲ್ ಅಮಾಲೋವರ್ ಬಂಧಿತ ಖದೀಮರು. ಮುಂಬೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರು, ಜೂನ್, 16ರಂದು 18 ಲಕ್ಷ ರೂಪಾಯಿ ಆಭರಣಗಳನ್ನು ಖರೀದಿಸಿ, ಬಸ್ಸಿನಲ್ಲಿ ಮಂಗಳೂರಿನತ್ತ ಹೊರಟಿದ್ದರು.
ಬಸ್ಸು ಉಡುಪಿ ಜಿಲ್ಲೆ ಬೈಂದೂರಿನ ಅರೆ ಶಿರೂರು ತಲುಪಿ ಟಿ ಗೆ ನಿಂತಿತು. ಪ್ರಯಾಣಿಕರು ಬಸ್ ಇಳಿದು ಹೋಟೆಲ್ ಗೆ ಹೋದದ್ದೇ ತಡ ಬೆನ್ನತ್ತಿ ಬಂದಿದ್ದ ನಾಲ್ಕು ಮಂದಿ ಕಳ್ಳರ ತಂಡ, ಒಳಗೆ ಹೋಗಿ 18 ಲಕ್ಷ ರೂಪಾಯಿ ಮೊತ್ತದ ಚಿನ್ನದ ಆಭರಣಗಳನ್ನು ಎಗರಿಸಿ, ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಬಸ್ ಕಂಡಕ್ಟರ್ ಮಾಹಿತಿಯ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದ್ದು, ಭಟ್ಕಳ ಹೊನ್ನಾವರ ತಾಲೂಕುಗಳಲ್ಲಿ ತಪಾಸಣೆ ಮಾಡಿದಾಗ ಕಾರು ಮಿಸ್ಸಾಗಿದೆ. ಮರುದಿನ ಬೆಂಗಳೂರಿನಲ್ಲಿ ಕಾರು ಪತ್ತೆ ಆಗ್ತದೆ. ದೇವನಹಳ್ಳಿಯಲ್ಲಿ ಮತ್ತೆ ಮಿಸ್ ಆಗಿ ಮಹಾರಾಷ್ಟ್ರದಲ್ಲಿ ಟ್ರ್ಯಾಕ್ ಆದ ಬಳಿಕ, ಗಂಗೊಳ್ಳಿ ಪೊಲೀಸರು, ಮಹಾರಾಷ್ಟ್ರದ ದುಲೇ ಜಿಲ್ಲೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದರು. ವಿಚಾರಣೆ ವೇಳೆ ಈ ತಂಡ ಮಧ್ಯಪ್ರದೇಶ ಮೂಲದ್ದು ಎಂದು ಗೊತ್ತಾಗಿದೆ. ಕಳ್ಳರ ಕೈಚಲಕ ಹೋಟೆಲ್ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.