
UDUPI: ರಾಷ್ಡ್ರೀಯ ಹೆದ್ದಾರಿ 66ರಲ್ಲಿ ಅವ್ಯವಸ್ಥೆ ; ಜನರ ನರಕಯಾತನೆ
ಉಡುಪಿ ಮಂಗಳೂರು ರಾಷ್ಡ್ರೀಯ ಹೆದ್ದಾರಿ 66 ಹಲವು ಅವ್ಯವಸ್ಥೆಗಳಿಂದ ಕೂಡಿದ್ದು, ಜನ ನರಕಯಾತನೆ ಅನುಭವಿಸುವಂತಾಗಿದೆ.
ಹೆದ್ದಾರಿ ಇಲಾಖೆ ಸರ್ವಿಸ್ ರಸ್ತೆ ಕಾಮಗಾರಿಯನ್ನು ಆಮೆಗತಿಯಲ್ಲಿ ಮಾಡುತ್ತಿರುವ ಪರಿಣಾಮವಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮನೆಗೆ ಕೃತಕ ನೆರೆ ನೀರು ನುಗ್ಗಿದೆ. ಉಚ್ಚಿಲ ಪೆಟ್ರೋಲ್ ಬಂಕ್ ನಿಂದ ಪೋಸ್ಟ್ ಆಫೀಸ್ ವರೆಗೆ ಎರಡು ಕಿಲೋಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಾಣ ಆಗುತ್ತಿದ್ದು, ಕಳೆದ ಒಂದು ವರ್ಷದಿಂದ ಎರಡು ಕಿಲೋಮೀಟರ್ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ.
ಹೆದ್ದಾರಿಯ ಇಕ್ಕೆಳಗಳಲ್ಲಿ ಗುತ್ತಿಗೆದಾರರು ಅಗೆದಿದ್ದು, ಮಳೆ ನೀರು ಸಾಗುವ ಹಾದಿಯನ್ನು ಮುಚ್ಚಲಾಗಿದೆ. ಇದರಿಂದ ಹೆದ್ದಾರಿ ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದೆ. ಮಾತ್ರವಲ್ಲ ,ಕಾಮಗಾರಿ ಪೂರ್ಣಗೊಳಿಸದ ಕಾರಣ ಹೆದ್ದಾರಿ ಪಕ್ಕದಲ್ಲಿ ಸಂಚರಿಸುವವರಿಗೂ ಕಷ್ಟಪಡುತ್ತಿದ್ದಾರೆ.