UDUPI : ಮಳೆಗಾಗಿ ದೇವರ ಮೊರೆ
Thursday, June 16, 2022
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಜೋರಾಗಿ ಮಳೆ ಸುರಿದು, ಕರೆ ತುಂಬಿ, ನದಿ ಉಕ್ಕಿ ಹರಿಯುತ್ತೆ. ಆದ್ರೆ ಈ ಬಾರಿ ಮುಂಗಾರು ಇನ್ನೂ ಪ್ರವೇಶ ಆಗಿಲ್ಲ. ಮಳೆ ಬಾರದೇ ಕೃಷಿ ಚಟುವಟಿಕೆ ನಡೆಸಲು ತೊಡಕಾಗಿ ರೈತರು ಆಕಾಶ ನೋಡುತ್ತಿದ್ದಾರೆ. ನಗರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಮುಂಗಾರು ಪ್ರವೇಶವಾಗಲಿ ಎಂದು ಜನ ಎಲ್ಲೆಡೆ ಪ್ರಾರ್ಥಿಸುತ್ತಿದ್ದಾರೆ. ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದಲ್ಲಿ ಉತ್ತಮ ಮಳೆ ಬೆಳೆ ಹಾಗೂ ಲೋಕಕಲ್ಯಾಣಾರ್ಥ ಸಿಯಾಳಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದಲ್ಲಿ ಶ್ರೀ ಗುರುನರಸಿಂಹ, ಅಂಜನೇಯ ಹಾಗೂ ಪರಿವಾರ ದೇವತೆಗಳಿಗೆ ಸೀಯಾಳ ಅಭಿಷೇಕವನ್ನು ಅರ್ಚಕ ವೇದಮೂರ್ತಿ ಜನಾರ್ದನ ಅಡಿಗ ನೇತ್ರತ್ವದಲ್ಲಿ ನೆರವೇರಿಸಲಾಯಿತು.