
UDUPI : ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ
Sunday, June 26, 2022
ಉಡುಪಿ ವಿಧಾನ ಸಭಾ ವ್ಯಾಪ್ತಿಯ ಹಡಿಲು ಬಿದ್ದ ಸುಮಾರು 2000 ಎಕರೆ ಭತ್ತದ ಕೃಷಿ ಭೂಮಿಯಲ್ಲಿ ಕಳೆದ ಬಾರಿ ಬೇಸಾಯ ಮಾಡಿ ಉತ್ತಮ ಫಸಲು ಪಡೆಯಲಾಗಿತ್ತು.
ಹೀಗಾಗಿ ಈ ಬಾರಿ ಮತ್ತೊಮ್ಮೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ, ಕೇದಾರೋತ್ಥಾನ ಟ್ರಸ್ಟ್ ವತಿಯಿಂದ 2ನೇ ಹಂತದ "ಹಡಿಲು ಭೂಮಿ ಕೃಷಿ ಅಂದೋಲನ"ದಡಿ ಭತ್ತದ ಬೇಸಾಯ ಶುರುವಾಗಿದೆ.. ಹಡಿಲು ಬಿದ್ದ ಕೃಷಿ ಭೂಮಿಯನ್ನು ಗುರುತಿಸಿ ಹದಗೊಳಿಸಿ ಭತ್ತದ ಸಸಿ ನೀಡಲಾಗುತ್ತಿದೆ.
ಸ್ವತಃ ಶಾಸಕ ರಘುಪತಿ ಭಟ್ ಅವರೇ ಟ್ರಾಕ್ಟರ್ ಮೂಲಕ ಉಳುಮೆ ಮಾಡಿ, ನಾಟಿ ಯಂತ್ರದ ಮೂಲಕ ಭತ್ತದ ಸಸಿ ನೆಟ್ಟು ಕೃಷಿಕರನ್ನು ಉತ್ತೇಜನ ಗೊಳಿಸುತ್ತಿದ್ದಾರೆ. ಕೃಷಿರು ಹುಮ್ಮಸ್ಸಿನಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ..