Bantwala: ರುಕ್ಸಾನಾಳ ಕಳೆದುಹೋದ ಚಿನ್ನಾಭರಣ ಹಿಂದಿರುಗಿಸಿದ ಶಂಕರ ನಾರಾಯಣ ಶೆಟ್ಟಿ
ಬಂಟ್ವಾಳ: ಮಹಿಳೆಯೋರ್ವಳ ಕಳೆದುಹೋದ ಚಿನ್ನಾಭರಣ ದೊರೆತ ರಿಕ್ಷಾ ಚಾಲಕ ಶಂಕರ ನಾರಾಯಣ ಶೆಟ್ಟಿ ಅದನ್ನು ವಾರಿಸುದಾರರಿಗೆ ಮರಳಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಿ. ಮೂಡಾ ಗ್ರಾಮದ ಅಬ್ದುಲ್ ಮಜೀದ್ ಎಂಬರ ಪತ್ನಿ ರುಕ್ಸಾನ ಇಂದು ಮಾಣಿಯಿಂದ ಬಿಸಿರೋಡಿಗೆ ದ್ವಿಚಕ್ರ ವಾಹನದಲ್ಲಿ ಹೋಗುವ ವೇಳೆ ತಮ್ಮ ವ್ಯಾನಿಟಿ ಬ್ಯಾಗ್ ಕಳೆದುಕೊಂಡಿದ್ದರು.
ವ್ಯಾನಿಟಿ ಬ್ಯಾಗ್ ನಲ್ಲಿ 50 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಇತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯರಲ್ಲಿ ಮಾಹಿತಿ ಸಂಗ್ರಹಿಸಿದ್ದು, ಆಟೋ ರಿಕ್ಷಾ ಚಾಲಕರಾದ ಶಂಕರ್ ನಾರಾಯಣ ಶೆಟ್ಟಿ ಮಾಣೆಯಿಂದ ಕಲ್ಲಡ್ಕಕ್ಕೆ ತೆರಳುವಾಗ ವ್ಯಾನಿಟಿ ಬ್ಯಾಗ್ ಸಿಕ್ಕಿದ್ದು ಶಂಕರ್ ನಾರಾಯಣರವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಂದು ನೀಡಿದ್ದು, ಅಲ್ಲಿ ಪೊಲೀಸರ ಸಮಕ್ಷಮದಲ್ಲಿ ಚಿನ್ನಾಭರಣವನ್ನು ಹಿಂದಿರುಗಿಸಿ ವಾರಸುದಾರ ಮಹಿಳೆಗೆ ಹಿಂದಿರುಗಿಸಲಾತು.