
ಉಡುಪಿ-ಪಣಿಯಾಡಿ ಬ್ರಹ್ಮಕಲಶೋತ್ಸವ: ಕೃಷ್ಣಮಠದಿಂದ ಹೊರೆಕಾಣಿಕೆ ( VIDEO)
ಇತಿಹಾಸ ಪ್ರಸಿದ್ಧ ಕ್ಷೇತ್ರ ಉಡುಪಿಯ ಪಣಿಯಾಡಿ ಶ್ರೀಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಕಾರ್ಯಕ್ರಮದ ಅಂಗವಾಗಿ ಉಡುಪಿಯ ರಥಬೀದಿಯ ಶ್ರೀಚಂದ್ರಮೌಳೀಶ್ವರ ಹಾಗೂ ಶ್ರೀಅನಂತೇಶ್ವರ ಮತ್ತು ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥಶ್ರೀಪಾದರು ಊರಿನ ಭಕ್ತರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇವೇಳೆ ಹಸಿರು ಹೊರೆಕಾಣಿಕೆಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು. ಬಳಿಕ ರಥಬೀದಿಯಿಂದ ಹೊರಟ ಭವ್ಯ ಹೊರೆಕಾಣಿಕೆ ಮೆರವಣಿಗೆಯು ನಗರದ ಕಲ್ಸಂಕ ಮಾರ್ಗವಾಗಿ ದೇವಾಲಯಕ್ಕೆ ತಲುಪಿತು. ಮೆರವಣಿಗೆಗೆ ವೇದಘೋಷ, ಬಿರುದಾವಲಿ, ಚೆಂಡೆ, ಮಹಿಳಾ ಚೆಂಡೆ ಬಳಗ, ಭಜನಾ ತಂಡಗಳು, ಕೀಲುಕುದುರೆ, ಬ್ಯಾಂಡ್, ಹುಲಿವೇಷ, ನಾಶಿಕ್ ಬ್ಯಾಂಡ್, ಮೆರುಗು ನೀಡಿದವು.