ಉಡುಪಿ- BJP ಪಕ್ಷದ ರೀಚಾರ್ಜ್ BOOTH ಗಳಲ್ಲಿ ನಡೆಯುತ್ತೆ : ಸಚಿವ ಸುನಿಲ್
Tuesday, May 3, 2022
ಪಕ್ಷದಲ್ಲಿ ಹೊಸತನಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುವ ಬಿ.ಎಲ್ ಸಂತೋಷ್ ಜಿ ಹೇಳಿಕೆ ವಿಚಾರವಾಗಿ ಉಡುಪಿಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್
ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ರಿಚಾರ್ಜ್ ನಮ್ಮ ಭೂತ್ ಗಳಲ್ಲಿ ನಡೆಯುತ್ತೆ. ಪಕ್ಷದ ರೀ ಚಾರ್ಜಿಂಗ್ ಸೆಂಟರ್ ನಮ್ಮ ಕಾರ್ಯಕರ್ತನ ಕೈಯಲ್ಲಿದೆ ಬೂತ್ ಮತ್ತು ಕಾರ್ಯಕರ್ತರನ್ನು ರಿಚಾರ್ಜ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ ಎಂದಿದ್ದಾರೆ
ಯಾರ ಹೇಳಿಕೆಗಳ ಮೂಲಕ ನಾವು ರಿಚಾರ್ಜ್ ಆಗುವುದಿಲ್ಲ. ನಮ್ಮ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಿಚಾರ್ಜ್ ಆಗುತ್ತಾರೆ
ಅಂದರು. ಹೊಸತನ ನಮ್ಮ ಸಂಘಟನೆಯ ಮೂಲ ಸ್ವರೂಪದಲ್ಲಿದೆ. ಪ್ರತಿಯೊಬ್ಬ ಕಾರ್ಯಕರ್ತ ನಲ್ಲಿ ಹೊಸತನ ಇದೆ. ಕಾರ್ಯಕರ್ತರ ಹೊಸತನವನ್ನು ಸಂಘಟನೆಗೆ ಸಮಾಜಕ್ಕೆ ಪೂರಕವಾಗಿ ಬಳಸುತ್ತೇವೆ. ನಮ್ಮ ಸಂಘಟನೆಗಳಲ್ಲಿ ಇರುವಷ್ಟು ಹೊಸತನ ಬೇರೆ ಯಾವ ಸಂಘಟನೆಯಲ್ಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಹೊಸತನಗಳಿಗೆ ಅವಕಾಶವನ್ನೂ ಕೊಡುತ್ತಾರೆ. ಹೊಸತನಕ್ಕೆ ಅವಕಾಶ ನಿರಂತರವಾದ ಪ್ರಕ್ರಿಯ. ಹಳೇಬೇರು ಹೊಸಚಿಗುರು ಇದ್ದರೇನೇ ಒಳ್ಳೆಯದು ಎನ್ನುವ ಗಾದೆ ಇದೆಯಲ್ಲ ಕಾಂಗ್ರೆಸ್ ಥರ ನಾವು ಒಂದೇ ಮರಕ್ಕೆ ಜೋತು ಬೀಳುವವರಲ್ಲ ಅಂತ ತಿಳಿಸಿದರು..