
UDUPI : ಬಬ್ಬುಸ್ವಾಮಿ ದೈವಸ್ಥಾನದ ಮೇಲ್ಚಾವಣಿ ನಿರ್ಮಾಣಕ್ಕೆ ವಿರೋಧ
Monday, May 30, 2022
ಉಡುಪಿಯ ಪಡುಬಿದ್ರೆ ಕಂಚಿನಡ್ಕದ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವ ಮೂಲ ಕ್ಷೇತ್ರದಲ್ಲಿ ದೈವಸ್ಥಾನದ ಮೇಲ್ಚಾವಣಿ ವಿರೋಧ ವ್ಯಕ್ತವಾಗಿದೆ. ದೈವಸ್ಥಾನದ ಈ ಜಾಗಕ್ಕೆ ಸೂಕ್ತ ಮೇಲ್ಚಾವಣಿಯ ವ್ಯವಸ್ಥೆ ಇಲ್ಲ. ಈಗ ದಾನಿಯೊಬ್ಬರು ಮೇಲ್ಚಾವಣಿ ಮಾಡಲು ಮುಂದಾಗಿದ್ದು ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೇಲ್ಚಾವಣಿ ಅಳವಡಿಸಿದರೆ ನಮ್ಮ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎನ್ನುವುದು ಸ್ಥಳೀಯರ ವಾದ. ಕಂಚಿನಡ್ಕ ಕ್ಷೇತ್ರಕ್ಕೆ ನೂರಾರು ವರ್ಷ ಇತಿಹಾಸವಿದೆ. ಇದೇ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ದಲಿತ ಸಮುದಾಯದ ನಿವಾಸಿಗಳಿದ್ದು, ಇವರಲ್ಲಿ ಕೆಲವರನ್ನು ಎಸ್ಡಿಪಿಐ ಪಕ್ಷ ತನ್ನ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಈಗ ತಮ್ಮ ನಿರ್ಧಾರದ ಪರ ನಿಲ್ಲದ ಎಸ್ಡಿಪಿಐ ಪಕ್ಷದ ವಿರುದ್ದ ಎಸ್ ಡಿ ಪಿ ಐ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ದಲಿತರು ಆಕ್ರೋಶಿತರಾಗಿದ್ದಾರೆ.
ಎಸ್ಡಿಪಿಐ ಪಕ್ಷದ ಈ ನಡೆಯಿಂದ ಬೇಸತ್ತು ದಲಿತ ಮುಖಂಡ ಸದಾಶಿವ ಕಂಚಿನಡ್ಕ ಈಗಾಗಲೇ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಎಸ್ಡಿಪಿಐ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಶಾಂತಿಸಭೆ ಕೂಡ ಮುರಿದು ಬಿದ್ದಿದ್ದು, ದಲಿತ ಸಂಘಟನೆಗಳ ಬೆಂಬಲಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಗಿದೆ.
ಹಿಂದೂ ಜಾಗರಣ ವೇದಿಕೆ ಮುಖಂಡರು ಸಭೆ ನಡೆಸಿದ್ದು ಸ್ಥಳೀಯ ಪಂಚಾಯತಿಗೆ ಒಂದು ವಾರದ ಗಡುವನ್ನು ವಿಧಿಸಿದ್ದಾರೆ. ಒಂದು ವಾರದೊಳಗೆ ಮೇಲ್ಚಾವಣಿ ಅಳವಡಿಸಲು ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.