ಉಡುಪಿ ಮಲ್ಪೆ ಬೀಚ್ ನಲ್ಲಿ ವಿಶೇಷ ಆಕರ್ಷಣೆ- ಅಲೆಗಳ ಮೇಲೆ ನಡೆದು ಸಾಗುವಂತ ತೇಲುವ ಸೇತುವೆ ( Floating Bridge)
Friday, May 6, 2022
ಉಡುಪಿ ಮಲ್ಪೆ ಬೀಚಿಗೆ ಹೊಸ ಆಕರ್ಷಣೆ ಒಂದು ಸೇರ್ಪಡೆಯಾಗಿ, ಕಡಲ ತಡಿಯ ಮೆರುಗು ಹೆಚ್ಚಿಸಿದೆ.. ರಾಜ್ಯದಲ್ಲಿ ಮೊದಲ ಬಾರಿಗೆ ಎಂಬಂತೆ ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವಂತ ತೇಲುವ ಸೇತುವೆ (floting bridge) ಇಂದು ಉದ್ಘಾಟನೆಯಾಗಲಿದ್ದು, ಪ್ರವಾಸಿಗರಿಗೆ ತೆರೆದುಕೊಂಡಿದೆ.
100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದ್ದು, ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವ ಅನುಭವವನ್ನು ಈ ಸೇತುವೆ ನೀಡಲಿದೆ. ಸಮುದ್ರದ ದಡದಿಂದ ತೆರೆಗಳ ನಿರ್ಮಾಣವಾಗಿರುವ ಈ ಸೇತುವೆ, ನೀರಿನಲ್ಲಿ ತೇಲುವ ಮಾದರಿಯಲ್ಲಿ ನಿರ್ಮಾಣವಾಗಿದೆ. ಇದರ ಮೇಲೆ ನಡೆದು ಸಮುದ್ರದಲ್ಲಿ ನೂರು ಮೀಟರ್ ವರೆಗೂ ನಡೆದು ಸಾಗುವ ಮೂಲಕ ತೇಲುವ ಸೇತುವೆ ಅನುಭವವನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ.
ಈ ಸೇತುವೆಯ ಮೇಲೆ ನಡೆದು ಸಾಗುವ ಪ್ರವಾಸಿಗರು ಅಲೆಗಳ ರಭಸಕ್ಕೆ ಸಮುದ್ರಕ್ಕೆ ಬೀಳದಂತೆ ತಡೆಯಲು ಸೇತುವೆಯ ಎರಡು ಬದಿಗಳಲ್ಲಿ ರೇಲಿಂಗ್ಸ್ ಕೂಡ ಅಳವಡಿಸಲಾಗಿದೆ. ಪಕ್ಷದ ರಾಜ್ಯವಾಗಿರುವ ಕೇರಳದ ಬೇಪೂರ್ ಬೀಚ್ ನಲ್ಲಿ ಇದೇ ರೀತಿಯ ಸೇತುವೆ ನಿರ್ಮಾಣವಾಗಿದ್ದು, ಪ್ರವಾಸಿಗರು ತನ್ನಂತ ಸೆಳೆಯುತ್ತಿದೆ. ಇದೇ ಹಿನ್ನಲೆಯಲ್ಲಿ ಕರ್ನಾಟಕದ ಮಲ್ಪೆ ಬೀಚ್ ನಲ್ಲಿ ಪ್ರಥಮ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ.