UDUPI ;ಮರವೇರಿ ಶೇಂದಿ ಇಳಿಸಿದ ಸ್ವಾಮಿ..! ( VIDEO)
Monday, April 4, 2022
ಕಾವಿದಾರಿ, ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮ, ಪ್ರವಚನ ಅಂತ ಬ್ಯುಸಿ ಆಗಿರೋದು ಕಾಮನ್. ಆದ್ರೆ ಇದಕ್ಕಿಂತ ಭಿನ್ನವಾಗಿ, ಉಡುಪಿಯಲ್ಲಿ ಸ್ವಾಮೀಜಿಯೊಬ್ಬರ ಮರವೇರಿ ಶೇಂದಿ ಇಳಿಸಿದ್ದಾರೆ.
ಉಡುಪಿಯ ಮಲ್ಪೆಗೆ ಆಗಮಿಸಿದ ಶರಣ ಬಸವೇಶ್ವರ ಮಠಾಧಿಪತಿ ಶ್ರೀ ಪ್ರಣಾವಾನಂದ ಸ್ವಾಮಿಜಿ ಸರಸರ ಅಂತ ತೆಂಗಿನ ಮರ ಏರಿ ಶೇಂದಿ ಇಳಿಸಿದ್ದಾರೆ..
ಮೂರ್ತೆದಾರರ ಸಮಸ್ಯೆ ಅರಿತುಕೊಳ್ಳುವ ಸಲುವಾಗಿ ಉಡುಪಿಗೆ ಆಗಮಿಸಿದ ಸ್ವಾಮೀಜಿ, ಮಲ್ಪೆಯ ಮೂರ್ತೆದಾರರೊಬ್ಬರ ಮನೆಗೆ ಹೋಗಿ, ಮಾತುಕತೆ ನಡೆಸಿ ಬಳಿಕ ಅವರ ಮನೆಯ ಎದುರಿನ ತೆಂಗಿನ ಮರ ಏರಿ ಶೇಂದಿ ಇಳಿಸಿ, ನೆರಿದಿದ್ದವರನ್ನು ಅಚ್ಚರಿಗೊಳಿಸಿದ್ದರು..