Swiggy, Zomato ವಿರುದ್ಧ ತನಿಖೆಗೆ ಆದೇಶ: ಕಾರಣ ನೋಡಿ
Tuesday, April 5, 2022
ನವದೆಹಲಿ: ಆನ್‌ಲೈನ್ ಮೂಲಕ ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಮತ್ತು ಝೊಮ್ಯಾಟೊ ಕಂಪನಿಗಳ ವಿರುದ್ಧ ತನಿಖೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶಿಸಿದೆ.
ರಾಷ್ಟ್ರೀಯ ರೆಸ್ಟಾರೆಂಟ್ ಸಂಘ (ಎನ್‌ಆರ್‌ಎಐ) ಸಲ್ಲಿಸಿದ ದೂರು ಆಧರಿಸಿ ಈ ತನಿಖೆಗೆ ಆದೇಶಿಸಲಾಗಿದೆ.
ಈ ಕಂಪನಿಗಳು ಮಾರುಕಟ್ಟೆಯಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಸಮಾನ ಸ್ಪರ್ಧೆಯ ಮೇಲೆ ಪರಿಣಾಮ ಉಂಟುಮಾಡುವಷ್ಟು ಇವು ಶಕ್ತಿಶಾಲಿ ಆಗಿದೆ ಎಂದು ಸಿಸಿಐ ಹೇಳಿದೆ.
ಝೊಮ್ಯಾಟೊ ಮತ್ತು ಸ್ವಿಗ್ಗಿ ಆನ್‌ಲೈನ್‌ನಲ್ಲಿ ಆಹಾರ ಪದಾರ್ಥಗಳ ಪೂರೈಕೆ ವಲಯದಲ್ಲಿ ದೊಡ್ಡ ವೇದಿಕೆಗಳು. ಇವು ಹೊಂದಿರುವ ಕೆಲವು ನಿಯಮಗಳು, ಹೊಸ ವೇದಿಕೆಗಳಿಗೆ ಈ ಕ್ಷೇತ್ರ ಪ್ರವೇಶಿಸಲು ಅಡ್ಡಿಯಾಗುತ್ತಿರುವ ಸಾಧ್ಯತೆ ಇದೆ ಎಂದು ಸಿಸಿಐ ತನ್ನ ಆದೇಶದಲ್ಲಿ ಹೇಳಿದೆ.