ಉಡುಪಿ-SELFI ಹುಚ್ಚಾಟ ; ಸೈಂಟ್ ಮೇರಿಸ್ ದ್ವೀಪದಲ್ಲಿ ಇಬ್ಬರು ಸಮುದ್ರ ಪಾಲು
Monday, April 18, 2022
ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಪ್ರವಾಸಿಗರಿಬ್ಬರು ನೀರುಪಾಲಾದ ಘಟನೆ ಇಂದು ಮಧ್ಯಾಹ್ನ ವೇಳೆಗೆ ನಡೆದಿದೆ.
ಸಮುದ್ರಪಾಲಾದ ಹಾವೇರಿಯ ಸತೀಶ್ ಎಂ. ನಂದಿಹಳ್ಳಿ ಶವ ಪತ್ತೆಯಾಗಿದ್ದು, ಬಾಗಲಕೋಟೆಯ ಸತೀಶ್ ಎಸ್ ಕಲ್ಯಾಣ್ ಶೆಟ್ಟಿಗಾಗಿ ಶೋಧ ಕಾರ್ಯ ಮುಂದುವರಿದಿದೆ.. ಉಡುಪಿಗೆ ಪ್ರವಾಸಕ್ಕೆ ಅಂತ ಬಂದ ಬೆಂಗಳೂರಿನ GKVK ಕೃಷಿ ಕಾಲೇಜಿನ 68 ವಿದ್ಯಾರ್ಥಿಗಳು
ಮಲ್ಪೆ ಬೀಚ್‌ಗೆ ಬಂದು ಅಲ್ಲಿಂದ ಸೈಂಟ್ ಮೇರಿಸ್ ಐಲ್ಯಾಂಡ್‌ಗೆ ತೆರಳಿದ್ದರು. ಸೈಂಟ್ ಮೇರಿಸ್‌ನಲ್ಲಿ ಲೈಫ್ ಗಾರ್ಡ್ ಸಿಬ್ಬಂದಿ ಎಷ್ಟು ಎಚ್ಚರಿಕೆ ನೀಡಿದರೂ ಅಪಾಯವನ್ನು ಲೆಕ್ಕಿಸದೇ ಇಬ್ಬರು ವಿದ್ಯಾರ್ಥಿಗಳು ಬಂಡೆಗಳ ಮೇಲೆ ನಿಂತು ಸೆಲ್ಪಿ ಕ್ಲಿಕಿಸುತ್ತಿದ್ದರು. ಈ ವೇಳೆ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.. ಎರಡು ವಾರಗಳ ಹಿಂದೆ ಕೇರಳದ ಇಬ್ಬರು ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಸಾವನ್ನಪ್ಪಿದರು..