Hijab Girl ಮಂಡ್ಯದ ಮುಸ್ಕಾನ್‌ಗೆ ಅಲ್‌ಖೈದಾ ಶಹಬ್ಬಾಸ್‌ಗಿರಿ - ಆದರೆ ಮುಸ್ಕಾನ್ ತಂದೆ ಹೇಳಿದ್ದೇನು?
Wednesday, April 6, 2022
ಬೆಂಗಳೂರು: ಹಿಜಾಬ್ ಸಂಘರ್ಷದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿ, ಸಂಘಪರಿವಾರದ ವಿದ್ಯಾರ್ಥಿಗಳನ್ನು ಏಕಾಂಗಿಯಾಗಿ ಎದುರಿಸಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‍ನನ್ನು ಭಾರತದ ಶ್ರೇಷ್ಠ ಮಹಿಳೆ ಎಂದು ಅಲ್‍ಖೈದಾ ಮುಖ್ಯಸ್ಥ ಅಯ್ಯನ್ ಜವಾರಿ ಬಣ್ಣಿಸಿದ್ದಾನೆ.
ಈ ಕುರಿತು ಸುಮಾರು ಎಂಟು ನಿಮಿಷದ ವಿಡಿಯೋ ಬಿಡುಗಡೆ ಮಾಡಿರುವ ಜವಾರಿ, ಮುಸ್ಕಾನ್‍ಳ ಧೈರ್ಯ, ಶೌರ್ಯ ನಮ್ಮೆಲ್ಲರಿಗೂ ಮಾದರಿ. ಈ ದಿಟ್ಟ ಮಹಿಳೆ ನಿಜಕ್ಕೂ ಭಾರತದ ಶ್ರೇಷ್ಠ ಮಹಿಳೆ ಎಂದು ಹೊಗಳಿದ್ದಾನೆ.
ಆದರೆ ಈ ಬೆಳವಣಿಗೆಗೆ ಪ್ರತಿಕ್ರಯಿಸಿರುವ ಮುಸ್ಕಾನ್ ತಂದೆ, ನಮ್ಮ ಪಾಡಿಗೆ ನಾವು ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯ ಬೇಡ, ನಮ್ಮ ಪಾಡಿಗೆ ನನ್ನನ್ನ ಬಿಡಿ. ನಮ್ಮನ್ನ ನೆಮ್ಮದಿಯಾಗಿ ಬದುಕಲು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.